Advertisement

ವಿದೇಶಿ ಭಾಷಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

07:01 AM Jun 13, 2019 | Team Udayavani |

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು ವಿವಿಧ ಪ್ರಮಾಣಪತ್ರ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ.

Advertisement

ಫ್ರೆಂಚ್‌, ಜರ್ಮನಿ, ಸ್ಪ್ಯಾನಿಷ್‌, ಇಟಲಿಯನ್‌, ಜಪಾನೀಸ್‌, ಕೋರಿಯನ್‌, ಚೀನಿ, ಫೋರ್ಚುಗಿಸ್‌, ರಷ್ಯನ್‌ ಮತ್ತು ಅರೇಬಿಕ್‌ ಭಾಷೆಗಳಲ್ಲಿ ಪ್ರಮಾಣ ಪತ್ರದ ಕೋರ್ಸ್‌, ಡಿಪ್ಲೊಮಾ, ಹೈಯರ್‌ ಡಿಪ್ಲೊಮಾ, ಅಡ್ವಾನ್ಸ್‌ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ : 080-22961280 ಅಥವಾ 9845489267ಗೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next