Advertisement
ಸಾರ್ವಜನಿಕ ಶಿಕ್ಷಣ ಇಲಾಖೆ ಫೆ.20ರ ರಾತ್ರಿ ಆರ್‌ಟಿಇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಬುಧವಾರ ರಾತ್ರಿ ವೇಳೆಗೆ 33 ಶೈಕ್ಷಣಿಕ ಜಿಲ್ಲೆಯಿಂದ ವಿವಿಧ ಖಾಸಗಿ ಶಾಲೆಗೆ 1007 ಅರ್ಜಿ ಸಲ್ಲಿಕೆಯಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಆಧಾರ್ ಸಂಖ್ಯೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ವೆಬ್‌ಸೈಟ್ ಡಿಡಿಡಿ.
schooleducation.com ಗೆ ಭೇಟಿ ನೀಡಿ ಆರ್‌ಟಿಇ ಲಿಂಕ್ ಒಪನ್ ಮಾಡಿದರೆ, ಆಧಾರ್ ಸಂಖ್ಯೆ ಇದೆಯೇ
ಅಥವಾ ಇಲ್ಲವೋ ಎಂದು ಕೇಳುತ್ತದೆ. ಆಧಾರ್ ಇದೇ ಎಂದು ಕ್ಲಿಕ್ ಮಾಡಿದರೆ ಓಪನ್ ಆಗಲು ಕನಿಷ್ಠ ಅರ್ಧಗಂಟೆ ತೆಗೆದುಕೊಳ್ಳುತ್ತಿದೆ. ಒಮ್ಮೊಮ್ಮೆ ಆ ಲಿಂಕ್
ಒಪನ್ ಆಗುವುದೇ ಇಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.