Advertisement

ಆ್ಯಪನ ಐಪ್ಯಾಡ್‌, ಐಫೋನ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ!

12:53 PM Aug 20, 2022 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೊ: ವಿಶ್ವವಿಖ್ಯಾತ ತಾಂತ್ರಿಕ ದೈತ್ಯ ಕಂಪನಿ ಆ್ಯಪಲ್‌ ಉತ್ಪನ್ನಗಳಿಗೆ ಭದ್ರತಾ ಸಮಸ್ಯೆ ಎದುರಾಗಿದೆ! ಅದರ ಐಫೋನ್‌, ಐಪ್ಯಾಡ್‌ ಮತ್ತು ಮ್ಯಾಕ್‌ ಸಾಧನಗಳ ಸಾಫ್ಟ್ ವೇರ್‌ಗಳಲ್ಲಿ ದೋಷ ಕಂಡುಬಂದಿದೆ.

Advertisement

ಇದನ್ನು ಹ್ಯಾಕರ್‌ಗಳು ದುರುಪಯೋಗ ಮಾಡಿಕೊಂಡು ಸಂಪೂರ್ಣ ಸಾಧನಗಳನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ಸ್ವತಃ ಆ್ಯಪಲ್‌ ಕಂಪನಿ ಹೇಳಿದೆ.

ಭದ್ರತಾ ತಜ್ಞರು ಈ ರೀತಿಯ ತೊಂದರೆ ಎದುರಿಸುತ್ತಿರುವ ಸಾಧನಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಮುಖ್ಯವಾಗಿ ಐಫೋನ್‌ 6ಎಸ್‌ ಮತ್ತು ನಂತರದ ಮಾಡೆಲ್‌ಗ‌ಳು, ಐಪ್ಯಾಡ್‌ನ‌ 5ನೇ ಮತ್ತು ನಂತರದ ಆವೃತ್ತಿಗಳು, ಐಪ್ಯಾಡ್‌ ಪ್ರೊನ ಎಲ್ಲ ಮಾಡೆಲ್‌ಗ‌ಳು, ಐಪ್ಯಾಡ್‌ ಏರ್‌2 ಮಾಡೆಲ್‌ಗ‌ಳನ್ನು ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಮ್ಯಾಕ್‌ ಆಪರೇಟಿಂಗ್‌ ಸಿಸ್ಟಮ್‌ಗಳನ್ನು ಬಳಸುತ್ತಿರುವ ಮ್ಯಾಕ್‌ ಕಂಪ್ಯೂಟರ್‌ಗಳನ್ನೂ ಮೇಲ್ದರ್ಜೆಗೇರಿಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ಯಾರ್ಯಾರು ಸಾಮಾಜಿಕವಾಗಿ ಜನಪ್ರಿಯತೆ ಹೊಂದಿದ್ದಾರೋ, ಅವರೆಲ್ಲ ಆ್ಯಪಲ್‌ ಸಾಧನಗಳ ಓಎಸ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಾಗಿರುವುದು ಅನಿವಾರ್ಯವೆಂದು ಸ್ವತಃ ಆ್ಯಪಲ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next