ವಾಷಿಂಗ್ಟನ್: ಗೂಗಲ್, ಆ್ಯಪಲ್‌ನಂತಹ ಕಂಪನಿಗಳು ಅದೆಷ್ಟೋ ಜನರಿಗೆ ಕನಸು. ಆ್ಯಪಲ್‌ನಂತಹ ದೊಡ್ಡ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿಕೊಂಡು ಕೋಟಿ ಕೋಟಿ ರೂ. ಸಂಬಳ ಎಣಿಸುತ್ತಿದ್ದ ಸಿಬ್ಬಂದಿಯೊಬ್ಬರು ಇದೀಗ ರಾಜೀನಾಮೆ ಸಲ್ಲಿಸಿ, ಸುದ್ದಿಯಲ್ಲಿದ್ದಾರೆ.
ರಾಜೀನಾಮೆಗೆ ಕಾರಣ ಕಂಪನಿಯು ವರ್ಕ್ ಫ್ರಂ ಹೋಂ ನಿಲ್ಲಿಸಿ, ಕಚೇರಿಗೆ ಬರಲು ಹೇಳಿರುವುದು!
ಆ್ಯಪಲ್‌ನ “ಮೆಷಿನ್ ಲರ್ನಿಂಗ್’ ವಿಭಾಗದ ನಿರ್ದೇಶಕರಾಗಿರುವ ಇಯಾನ್ ಗುಡ್‌ಫೆಲ್ಲೋ ಇತ್ತೀಚೆಗೆ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾರೆ.
ಸಂಸ್ಥೆಯು ಮೇ 23ರಿಂದ ವರ್ಕ್ ಫ್ರಂ ಹೋಂ ಬದಲು ಹೈಬ್ರಿಡ್ ಸಿಸ್ಟಂ ಅನುಸರಿಸಲಿದ್ದು, ಎಲ್ಲ ಸಿಬ್ಬಂದಿ ವಾರಕ್ಕೆ ಕನಿಷ್ಠ 3 ದಿನ ಆಫೀಸಿಗೆ ಬರಬೇಕೆಂದು ಸೂಚಿಸಿದೆ.
ಆದರೆ ಆಫೀಸಿಗೆ ಬರಲು ಇಷ್ಟವಿಲ್ಲವೆನ್ನುವ ಕಾರಣಕ್ಕೆ ಇಯಾನ್ ರಾಜೀನಾಮೆ ಸಲ್ಲಿಸಿದ್ದಾರೆ. ಅಂದ ಹಾಗೆ ಇಯಾನ್ ಅವರಿಗೆ ಆ್ಯಪಲ್ ಸಂಸ್ಥೆ ವರ್ಷಕ್ಕೆ 6-8 ಕೋಟಿ ರೂ. ಸಂಬಳ ಕೊಡುತ್ತಿತ್ತು.