Advertisement

Apple employee;ಕೋಟ್ಯಂತರ ರೂ.ವಂಚನೆ; Apple ಕಂಪನಿ ಉದ್ಯೋಗಿಗೆ 3 ವರ್ಷ ಜೈಲುಶಿಕ್ಷೆ

03:43 PM Apr 29, 2023 | Team Udayavani |

ವಾಷಿಂಗ್ಟನ್:‌ ಭಾರೀ ಪ್ರಮಾಣದ ಹಣಕಾಸು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಂಧಿಸಿದಂತೆ Apple ಕಂಪನಿಯ ಭಾರತೀಯ ಮೂಲದ ಉದ್ಯೋಗಿಗೆ ಕೋರ್ಟ್‌ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

Advertisement

“Apple ಕಂಪನಿಯ ಹೆಸರಿನಲ್ಲಿ ಕಿಕ್ಸ್‌ ಬ್ಯಾಕ್ಸ್‌, ಫೋನ್‌ ನ ಬಿಡಿ ಭಾಗಗಳ ಕಳ್ಳತನ, ಇನ್‌ ವಾಯ್ಸ್‌ ಗಳಲ್ಲಿ ವಂಚನೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸಿರುವುದಾಗಿ ಅಪರಾಧಿ ಧೀರೇಂದ್ರ ಪ್ರಸಾದ್‌ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಸ್ಪರ್ಧಿ ಎರಡು ಕಂಪನಿಗಳ ಮಾಲೀಕರ ಜತೆ ಸೇರಿ ಪಿತೂರಿ ಮಾಡಿರುವುದಾಗಿ ಹೇಳಿರುವ ಪ್ರಸಾದ್‌ ಆದಾಯದ ಮೇಲಿನ ತೆರಿಗೆಯನ್ನು ವಂಚಿಸಿರುವುದಾಗಿ ವರದಿ ತಿಳಿಸಿದೆ. ಪ್ರಸಾದ್‌ Apple ಕಂಪನಿಯಲ್ಲಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಬಯಲಿಗೆ ಬಾರದಂತೆ ತಡೆಯಲು ಕಂಪನಿಯ ಆಂತರಿಕ ವಂಚನೆ ಪತ್ತೆ ತಂತ್ರಗಾರಿಕೆಯನ್ನು ಬಳಸಿಕೊಂಡಿರುವುದಾಗಿ ಅಮೆರಿಕದ ಜಸ್ಟೀಸ್‌ ಡಿಪಾರ್ಟ್‌ ಮೆಂಟ್‌ ಆರೋಪಿಸಿದೆ.

ಕಂಪನಿಯ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಪ್ರಸಾದ್‌ ಗೆ ಅವಕಾಶ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಕಂಪನಿಯ ಉನ್ನತ ಹುದ್ದೆಯಲ್ಲಿದ್ದ ಪ್ರಸಾದ್‌ ವಿಶ್ವಾಸದ್ರೋಹ ಎಸಗಿದ್ದಾನೆ. ತಾನು ಶ್ರೀಮಂತನಾಗಬೇಕೆಂಬ ದುರಾಸೆಯಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next