Advertisement

ಡೊನೇಷನ್‌ ಹಾವಳಿ ತಡೆಗೆ ಮನವಿ

07:07 AM May 19, 2020 | Suhan S |

ಹರಪನಹಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಮಾಯಕ ವಿದ್ಯಾರ್ಥಿಗಳಿಂದ ಡೊನೇಷನ್‌ ವಸೂಲಿ ಮಾಡುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿ ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್‌ ಒತ್ತಾಯಿಸಿದೆ.

Advertisement

ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ಸಂಘಟನೆ ನಾಯಕರು ಮತ್ತು ಪೋಷಕರನ್ನು ಒಳಗೊಂಡು ತಾಲೂಕು ಆಡಳಿತ ಶೀಘ್ರವೇ ಸಭೆಯನ್ನು ಕರೆಯಬೇಕು. ಶಾಲಾ ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳನ್ನು ತಾವೇ ಖುದ್ದಾಗಿ ಬ್ಯಾಂಕ್‌ನ ಚಲನ್‌ ಮೂಲಕವೇ ಹಣವನ್ನು ಸಂದಾಯ ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಐವೈಎಫ್‌ ರಾಜ್ಯ ಕಾರ್ಯದರ್ಶಿ ಎಚ್‌.ಎಂ.ಸಂತೋಷ, ಎಐಎಸ್‌ಎಫ್‌ ರಾಜ್ಯ ಸಂಚಾಲಕ ರಮೇಶನಾಯ್ಕ, ತಾಲೂಕು ಸಂಚಾಲಕ ನಾಗರಾಜನಾಯ್ಕ, ಮುಖಂಡರಾದ ಮುಜಿಬುರ್‌ ರಹೀಮಾನ್‌, ಕಾಶಿನಾಥ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next