Advertisement

ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

06:24 AM May 30, 2020 | Team Udayavani |

ಹಿರೇಕೆರೂರ: ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವ್ಯವಸಾಯ ಕೂಲಿ (ವೃತ್ತಿಪರ) ಕಾರ್ಮಿಕರ ಸಂಘಟನೆ ತಾಲೂಕು ಘಟಕದಿಂದ ತಾಪಂ ಇಒ ಮೂಲಕ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.

Advertisement

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಮತ್ತು ಬಡವರಿಗೆ ಗ್ರಾಪಂ ಮೂಲಕ ಆಹಾರ ಸಾಮಾಗ್ರಿ ಕಿಟ್‌ ವಿತರಿಸಬೇಕು. ನರೇಗಾ ಯೋಜನೆ ಕೂಲಿಕಾರರಿಗೆ ಕಾರ್ಮಿಕ ಕಾರ್ಡ್‌ ನೀಡಬೇಕು ಮತ್ತು ಯೋಜನೆಯಡಿ ಕೂಲಿ ಮಾಡುವಾಗ ಆಕಸ್ಮಿಕ ಮರಣ ಹೊಂದಿದ ಕೂಲಿಕಾರರಿಗೆ 5ಲಕ್ಷ ರೂ. ಪರಿಹಾರ ನಿಗದಿಪಡಿಸಬೇಕು. 250 ಮಾನವ ದಿನಗಳನ್ನು ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಲೂಕು ಘಟಕದ ಅಧ್ಯಕ್ಷೆ ಕಾಮಾಕ್ಷಿ ರೇವಣಕರ, ಉಪಾಧ್ಯಕ್ಷೆ ಶಶಿಕಲಾ ಕಣವೇರ, ಗೌರವಾಧ್ಯಕ್ಷ ನಾಗರಾಜ ಮಾಳೂರ, ಪ್ರಧಾನ ಕಾರ್ಯದರ್ಶಿ ನವೀನ್‌ ಹುಲ್ಲತ್ತಿ, ವಿಜಯಾ ದೊಣ್ಣೇರ ಸೇರಿದಂತೆ ಕೂಲಿಕಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next