Advertisement
22 ಮಂದಿ ಕಣ್ಣಿನ ದಾನಕ್ಕೆ ನೋಂದಣಿ ಮಾಡಿಸಿದರೆ, 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಮಧ್ಯಾಹ್ನ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ನಿವೃತ್ತ ನ್ಯಾ. ಕೆ.ಎಲ್. ಮಂಜುನಾಥ್ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
Related Articles
Advertisement
ಬಂಧಿಸುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ: ಒಂದೆಡೆ ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿಭಟನೆ ಕೈಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಎರಡು ಬಾರಿ ನಡೆಸಿದ ಸಭೆಯೂ ವಿಫಲವಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಡೀನ್ ಸೇರಿದಂತೆ ಆಸ್ಪತ್ರೆಗಳ ವೈದ್ಯ ಅಧೀಕ್ಷಕರ ಮಾತಿಗೂ ಜಗ್ಗುತ್ತಿಲ್ಲ. ಬುಧವಾರವೂ ನಗರ ಪೊಲೀಸ್ ಆಯುಕ್ತರು ಬಂದಾಗಲೂ ವೈದ್ಯಕೀಯ ವಿದ್ಯಾರ್ಥಿಗಳು ” ಹಲ್ಲೆ ಮಾಡುವವರನ್ನು ಬಂದಿಸುವವರೆಗೂ, ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಹೇಳಿದ ಕಿರಿಯ ವೈದ್ಯರು, ನಾಳೆಯೂ ಪ್ರತಿಭಟನೆ ಮುಂದುವರಿಸಲಿದ್ದಾರೆ.
ರೋಗಿಗಳಿಗೆ ಮತ್ತಷ್ಟು ಸಮಸ್ಯೆ: ಪ್ರತಿಭಟನೆ ಹಿನ್ನೆಲೆ ವಿಕ್ಟೋರಿಯಾ ಸಮುತ್ಛಯದ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ಸೇವೆ ವ್ಯತ್ಯಯ ಉಂಟಾಯಿತು. ವಿವಿಧ ಚಿಕಿತ್ಸಾ ವಿಭಾಗಗಳ ಎದುರು ಸಾಕಷ್ಟು ಮಂದಿ ಸರತಿಯಲ್ಲಿ ನಿಂತದ್ದು ಕಂಡುಬಂದಿತು. ಪ್ರತಿಭಟನನಿರತರು ಆಸ್ಪತ್ರೆ ಭಾಗಿಲಲ್ಲೆ ಕುಳಿತಿದ್ದರಿಂದ ರೋಗಗಳ ಓಡಾಡಕ್ಕೆ ಸಾಕಷ್ಟು ಸಮಸ್ಯೆಯಾಯಿತು. ಜತೆಗೆ ಧ್ವನಿವರ್ಧಕ, ಜೋರು ಧ್ವನಿಯಲ್ಲಿ ಘೋಷಣೆಗಳು ಕೂಗಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೂ ಬೆಳಗ್ಗೆಯಿಂದ ಸಂಜೆ ವರೆಗೂ ಸಮಸ್ಯೆಯಾಯಿತು.
ಪ್ರತಿಭಟನೆಯಿಂದ ಸಂತ್ರಸ್ತರಿಗೆ ನೆರವಾಯಿತೇ?: ಕಿರಿಯ ವೈದ್ಯರ ನಿರಂತರ ಪ್ರತಿಭಟನೆಯಿಂದ ಕಣ್ಣುಕಳೆದುಕೊಂಡ ಸಂತ್ರಸ್ತರ ವಿಚಾರ ಎಲ್ಲೆಡೆ ಸದ್ದು ಮಾಡಿತು. ಇದರ ಪರಿಣಾಮ ಸಚಿವರು ಸಂತ್ರಸ್ತರ ನೆರವಿಗೆ ಧಾವಿಸಿ ಮೂರು ಲಕ್ಷ ರೂ. ಪರಿಹಾರ ಘೋಷಿಸಿದ್ದರು ಎಂದು ತಿಳಿದು ಬಂದಿದೆ.
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಔಷಧ ವ್ಯತ್ಯಯವಾಗಿ 22 ಮಂದಿ ಕಣ್ಣು ಕಳೆದುಕೊಂಡಿದ್ದರು. ಈ ಪೈಕಿ ವಯಸ್ಸಾದವರು ಹಾಗೂ ಬಡವರೇ ಹೆಚ್ಚಿದ್ದರು. ಕಣ್ಣು ಕಳೆದುಕೊಂಡಿದ್ದವರು ಪೊಲೀಸ್ ದೂರು ನೀಡಿದ್ದು, ಔಷಧ ವ್ಯತ್ಯಯ ಎಂದು ಪ್ರಕರಣ ತನಿಖೆಯಲ್ಲಿತ್ತು. ಇತ್ತ ಕಣ್ಣು ಕಳೆದುಕೊಂಡವರು ನಾಲ್ಕು ತಿಂಗಳಾದರೂ ಚಿಕಿತ್ಸೆಯೂ ಸಿಗದೆ, ಪರಿಹಾರ ಧನವೂ ಸಿಗದೇ ಕಷ್ಟ ಪಡುತ್ತಿದ್ದರು.
ನ.1 ರಂದು ಕರವೇ ಈ ಕುರಿತು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿತ್ತು. ಆ ವೇಳೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರು ಠಾಣೆಗೆ ದೂರು ನೀಡಿ ನಿರಂತರ ಪ್ರತಿಭಟನೆಗೆ ಮುಂದಾದರು. ಇದು ಸಂತ್ರಸ್ತರ ನೆರವಿಗೆ ಕಾರಣವಾಯಿತು.