Advertisement

ಬೀದರ ಪ್ರವಾಸೋದ್ಯಮ ಅಭಿವೃದ್ದಿಗೆ ಮನವಿ

02:52 PM Nov 10, 2021 | Team Udayavani |

ಬೀದರ: ಐತಿಹಾಸಿಕ ತಾಣಗಳನ್ನು ಹೊಂದಿರುವ ಬೀದರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಕೇಂದ್ರ ರಸಾಯನಿಕ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನರೆಡ್ಡಿ ಅವರನ್ನು ಭೇಟಿ ಮಾಡಿ ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದ್ದಾರೆ.

Advertisement

ಬೀದರನಲ್ಲಿ ಹಿಂದು, ಸೂಫಿ, ಸಿಖ್‌, ಬೌದ್ಧ, ಜೈನ್‌ ಮತ್ತು ಕ್ರಿಶ್ಚಿಯನ್‌ ಧರ್ಮಿಯರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವುಳ್ಳ ಅನೇಕ ದರ್ಶನೀಯ ಸ್ಥಳಗಳಿವೆ. ಯಾತ್ರಿಕರಿಗೆ ಉಳಿದುಕೊಳ್ಳಲು, ಬಂದು ಹೊಗಲು ಪ್ರಸಾದ ಯೋಜನೆಯಡಿ ಕನಿಷ್ಠ ನಾಗರಿಕ ಸೌಲಭ್ಯಗಳ ಅಭಿವೃದ್ಧಿಪಡಿಸುವುದು ಅವಶ್ಯಕತೆ ಇದೆ ಎಂದು ಒತ್ತಾಯಿಸಿದ್ದಾರೆ.

ವಿಶೇಷವಾಗಿ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಜೀವನ ಸಂದೇಶಗಳ ಸೂಕ್ತ ಪ್ರಸರಣಕ್ಕಾಗಿ ಕ್ಷೇತ್ರದ ಬಹುಮುಖೀ ವಿಕಾಸ ಆಗಬೇಕು. ಸ್ವದೇಶ ದರ್ಶನ ಯೋಜನೆಯಡಿ ಕಲಬುರಗಿಯ ಖಾಜಾ ಬಂದೇ ನವಾಜ್‌ ದರ್ಗಾ ಮತ್ತು ಬೀದರ, ಕಲಬುರಗಿಯ ಕೋಟೆಗಳಲ್ಲಿ ಮೂಲಭೂತ ಸೌಕರ್ಯಗಳ ಉನ್ನತ್ತಿಕರಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೀದರ ನಗರದ ಗುರುದ್ವಾರ, ಶ್ರೀ ನರಸಿಂಹ ಝರಣಾ, ಶ್ರೀ ಸಿದ್ದಾರೂಢ ಮಠ, ಅಷ್ಟೂರನ ಮಾಣಿಕಪ್ರಭು ಮಂದಿರ ಹಾಗೂ ಸ್ಮಾರಕಗಳು, ಪಾಪನಾಶ, ಮೈಲಾರ ಮಲ್ಲಣ್ಣಾಗಳಲ್ಲಿ ಯಾತ್ರಿಕರಿಗೆ ಮೂಲ ಸೌಕರ್ಯಗಳು ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ವೇಳೆ ಸಚಿವ ಕಿಶನರೆಡ್ಡಿ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next