Advertisement

ಬಂಧನ ವಿರೋಧಿಸಿ ಮನವಿ

02:56 PM Jun 08, 2018 | Team Udayavani |

ಹರಪನಹಳ್ಳಿ: ರಾಜ್ಯ ದೇವದಾಸಿ ವಿಮೋಚನ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ, ಕೆಪಿಆರ್‌ಎಸ್‌ ಮುಖಂಡ
ಶಿವಶಂಕರ್‌ ಸೇರಿದಂತೆ ಪ್ರಗತಿಪರ, ದಲಿತ ಮುಖಂಡರನ್ನು ಬಂಧಿಸಲಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು
ಆಗ್ರಹಿಸಿ ತಾಲೂಕು ದೇವದಾಸಿ ವಿಮೋಚನ ಸಂಘಟನೆ, ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕೆಪಿಆರ್‌ಎಸ್‌ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಗೋನಾಳ
ಗ್ರಾಮದ ದಲಿತ ಯುವಕನೊಬ್ಬನ ಕೈ ಕತ್ತರಿಸಿದ ಆರೋಪಿಯನ್ನು ಬಂಧಿಸಬೇಕು ಮತ್ತು ಗ್ರಾಮದಲ್ಲಿ ಶಾಂತಿ ಕಾಪಾಡಬೇಕು.

Advertisement

ಅಲ್ಲಿನ ಮರಳು ಮಾಫಿಯಾ ಚಟುವಟಿಕೆಗಳನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದಿಂದ
ಶಾಂತಿಯುತ ಪಾದಯಾತ್ರೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ಅಲ್ಲಿನ ಪೋಲಿಸರು ಬಂಧಿ ಸಿದ ಕ್ರಮವನ್ನು ಖಂಡಿಸಿದ ಸಂಘಟನೆಗಳು, ಇಂತಹ ಘಟನೆಗೆ ಕಾರಣವಾದ ಅಂಶಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೋರಾಟಗಾರರ ಬಂಧನ ಪ್ರಜಾಸತ್ತಾತ್ಮಕ ಹಕ್ಕುಗಳ ದಮನ ಮಾಡುವ ಹುನ್ನಾರವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಕ್ರಮ ಹೋರಾಟವನ್ನು ಹತ್ತಿಕ್ಕುವ ಕುತಂತ್ರದ ಕೆಲಸವಾಗಿದೆ.

ತಕ್ಷಣವೇ ಬಂಧಿತ ಪ್ರತಿಭಟನಾಕಾರರನ್ನು ಬೇಶರತ್‌ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಸರ್ಕಾರ ಕೂಡಲೇ ಹಲ್ಲೆಗೊಳಗಾಗಿರುವ ದಲಿತ ಯುವಕನಿಗೆ ರಕ್ಷಣೆ ನೀಡಿ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಜಿಲ್ಲಾ ಸಂಘಟನೆಯ ಅಧ್ಯಕ್ಷೆ ಟಿ.ವಿ.ರೇಣುಕಮ್ಮ, ಕೆಪಿಆರ್‌ಎಸ್‌ನ ಕೆ.ಟಿ.ರಾಜಪ್ಪ, ಕೃಷಿ ಕೂಲಿಕಾರರ ಸಂಘದ ಮುಖಂಡ ಎಚ್‌. ರಹಮತ್‌ಉಲ್ಲಾ, ಎಸ್‌. ಕೆಂಚಮ್ಮ, ಎಸ್‌. ರೇಣುಕ, ಎನ್‌. ಹಾಲೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next