ಬೆಂಗಳೂರು: ವಿಶ್ವದ ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟರ್ ಕಂಪನಿ ಆಧುನಿಕ ಅಪಾಚೆ ಆರ್‌ಟಿಆರ್ 160 4ವಿ ಸರಣಿಯ ಮೋಟರ್‌ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಈ ಸರಣಿಯ ವಾಹನಗಳಲ್ಲಿ ನೂತನ ಶೈಲಿಯ ಹೆಡ್‌ಲ್ಯಾಂಪ್ ಅಳವಡಿಸಿದ್ದು, ಸಿಗ್ನೇಚರ್ ಡೇ ಟೈಂ ರನ್ನಿಂಗ್ ಲ್ಯಾಂಪ್ ಮತ್ತು ಮೂರು ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಕಂಪನಿಯು ಇದರ ಜೊತೆಗೇ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ವಿಶೇಷ ಸರಣಿಯನ್ನು ಪರಿಚಯಿಸಿದ್ದು, ಇದರಲ್ಲಿ ಈ ವರ್ಗದ ವಾಹನಗಳಲ್ಲಿಯೇ ಇದೇ ಮೊದಲ ಬಾರಿಗೆ ಹೊಂದಾಣಿಸಬಹುದಾದ ಕ್ಲಚ್, ಬ್ರೇಕ್ ಲೆವೆರ್ ಇದೆ. ವಿಶೇಷವಾದ ಕಪ್ಪು ಮತ್ತು ಕೆಂಪು ಬಣ್ಣದ ಅ ಲಾಯ್ ವ್ಹೀಲ್‌ಗಳು, ನೂತನ ಸೀಟಿನ ಶೈಲಿ ಇದ್ದು, ನವೀನ ಹೆಡ್ ಲ್ಯಾಂಪ್ ಅನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:- 5 ಕೆ.ಜಿ. ಚಿನ್ನದ ಪೇಸ್ಟ್ ವಶಕ್ಕೆ
ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಟಿವಿಎಸ್ ಅಪಾಚೆ ಆರ್ ಟಿಆರ್ 160 ವಿ ವಿಶೇಷ ಸರಣಿ ವಾಹನಗಳು ಈಗ ಮೂರು ವಿಧಧ ರೈಡ್ ಮೋಡ್‌ಗಳಲ್ಲಿ ಅಂದರೆ ಅರ್ಬನ್, ನ್ಪೋರ್ಟ್ ಮತ್ತು ರೇನ್, ಗೇರ್ ಶಿಫ್ಟ್ ಇಂಡಿಕೇಟರ್ ಮತ್ತು ರೇಡಿಯಲ್ ಟೈರ್ ಅನ್ನು ಹೊಂದಿದೆ. ಉನ್ನತ ಮಾದರಿಯ ಅಪಾಚೆ ಆರ್ ಟಿಆರ್ 160 4ಗಿ ವಾಹನದಲ್ಲಿ ಟಿವಿಎಸ್ ಸ್ಮಾರ್ಟ್ ಎಕ್ಸ್ ಕನೆಕ್ಟ್ ಸೌಲಭ್ಯವಿದೆ.
ನೂತನ ವಾಹನ ಬಿಡುಗಡೆ ವೇಳೆ ಟಿವಿಎಸ್ ಮೋಟರ್ ಕಂಪನಿಯ ಮುಖ್ಯಸ್ಥ (ಮಾರ್ಕೆಟಿಂಗ್) ಮೇಘಶ್ಯಾಂ ದಿಘೋಲೆ ಮಾತನಾಡಿ, “ಅಪಾಚೆ ಆರ್‌ಟಿಆರ್ 160 4ವಿ ಸರಣಿಯ ವಾಹನಗಳು ಎಂದಿಗೂ ನಮ್ಮ ಬಹು ನಿರೀಕ್ಷಿತ ಗ್ರಾಹಕರ ಆಕಾಂಕ್ಷೆಗಳಿಗೆ ಪೂರಕವಾಗಿ ಇರಲಿವೆ ಎಂದಿದ್ದಾರೆ.