Advertisement

ಸೆಟ್ಟೇರಿದ ‘ಅಪ್ಪ ಈಸ್ ಗ್ರೇಟ್’

04:16 PM Oct 23, 2022 | Team Udayavani |

“ಸುರೇಶ್‌ ಪ್ರೊಡಕ್ಷನ್‌ ಕಂಬೈನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ತಂದೆ-ಮಗ ಬಾಂಧವ್ಯದ ಕಥಾಹಂದರ ಹೊಂದಿರುವ “ಅಪ್ಪ ಈಸ್‌ ಗ್ರೇಟ್‌’ ಚಿತ್ರ ಇತ್ತೀಚೆಗೆ ಸೆಟ್ಟೇರಿತು.

Advertisement

ಫಿಲಂ ಚೇಂಬರ್‌ ಅಧ್ಯಕ್ಷ ಭಾ. ಮ. ಹರೀಶ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದರು. ಶ್ರೀಕಾಂತ್‌ ಹೊನ್ನವಳ್ಳಿ ನಿರ್ದೇಶನದ ಈ ಚಿತ್ರಕ್ಕೆ ಜಿ. ರಾಜಶೇಖರ್‌ ಕಥೆ, ಸಂಭಾಷಣೆಯಿದೆ. ಅವಿನಾಶ್‌ ಮತ್ತು ಪ್ರೇರಣಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಶೋಭರಾಜ್‌, ಮೀಸೆ ಆಂಜನಪ್ಪ, ಹೊನ್ನವಳ್ಳಿ ಕೃಷ್ಣ, ರಾಧಿಕಾ, ಸೌಮ್ಯಾ, ಅಮೂಲ್‌ ಗೌಡ, ಶಿಲ್ಪಾ, ಕವನ, ಚಂದ್ರಪ್ರಭಾ, ಪ್ರೇಮಾ ರಾಥೋಡ್‌, ಶಿವಕುಮಾರ ಆರಾಧ್ಯ ಇತರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಬೆಂಗಳೂರು, ಕಾರವಾರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next