Advertisement
ಮಧುಮೇಹಿ ಯಾಗಿ ರುವ ಅವರಿಗೆ ಇನ್ಸುಲಿನ್ ನೀಡಲು ನಿರಾಕರಿಸಲಾಗು ತ್ತಿದೆ. ಜತೆಗೆ ಅವರ ವೈದ್ಯರ ಜತೆ ಮಾತುಕತೆ ನಡೆಸಲೂ ನಿರಾಕರಿಸಲಾಗಿದೆ. ಈ ಮೂಲಕ ಕೇಜ್ರಿವಾಲ್‌ರನ್ನು ನಿಧಾನ ವಾಗಿ ಸಾಯಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ವಿರುದ್ಧ ಕೂಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರ ಆರೋಗ್ಯ ಹದಗೆಟ್ಟರೆ ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರಿ ವಹಿಸಿಕೊಳ್ಳಲಿ ದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ ಸೌರಭ್.
ದಿಲ್ಲಿ ಅಬಕಾರಿ ಹಗರಣದ ಕಿಂಗ್‌ಪಿನ್ ಎಂದು ಉದ್ಯಮಿ ಶರತ್ ರೆಡ್ಡಿ ಅವರನ್ನು ಇ.ಡಿ.ಹೆಸರಿಸಿದೆ. ಅವರು ಚುನಾವಣ ಬಾಂಡ್ ಮೂಲಕ ಬಿಜೆಪಿಗೆ 60 ಕೋಟಿ ರೂ. ನೀಡಿದ್ದಾರೆ. ಅವರ ವಿರುದ್ಧ ಇ.ಡಿ. ಏಕೆ ತನಿಖೆ ನಡೆಸಿಲ್ಲ ಎಂದು ಆಪ್ ಸಂಸದ ಸಂಜಯ ಸಿಂಗ್ ಪ್ರಶ್ನಿಸಿದ್ದಾರೆ. ಬಂಧನವಾದ ಬಳಿಕ 2022ರಲ್ಲಿ ಬಿಜೆಪಿಗೆ 5 ಕೋಟಿ ರೂ. ನೀಡಿದ್ದರು. 6 ತಿಂಗಳ ಜೈಲಲ್ಲಿ ಇದ್ದು ಬಿಡುಗಡೆಯಾದ ಬಳಿಕ ಮತ್ತೆ 50 ಕೋಟಿ ರೂ. ನೀಡಿದ್ದರು ಎಂದು ಸಂಜಯ ಸಿಂಗ್ ಆರೋಪಿಸಿದ್ದಾರೆ. ಬಂಧನಕ್ಕೂ ಮೊದಲೇ ಇನ್ಸುಲಿನ್ ನಿಲ್ಲಿಸಿದ್ದ ಕೇಜ್ರಿ: ಜೈಲಧಿಕಾರಿಗಳು
ಬಂಧನಕ್ಕೂ ಹಲವು ತಿಂಗಳುಗಳ ಮೊದಲಿನಿಂದಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪರ್ಯಾಯ ಔಷಧ ಮೆಟ್‌ಫೋರ್ಮಿನ್ ಮಾತ್ರೆ ಸೇವಿಸುತ್ತಿದ್ದಾರೆ. ಆರೋಗ್ಯ ತಪಾಸಣೆಯ ವೇಳೆ ಸ್ವತಃ ಕೇಜ್ರಿವಾಲ್ ಅವರೇ ಈ ಮಾಹಿತಿ ನೀಡಿದ್ದಾರೆ ಎಂದು ತಿಹಾರ್ ಜೈಲು ಆಡಳಿತ ತಿಳಿಸಿದೆ. ಅಲ್ಲದೆ ಕೇಜ್ರಿವಾಲರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿಲ್ಲ ಹಾಗೂ ಅಗತ್ಯಬಿದ್ದರೆ ಇನ್ಸುಲಿನ್ ಒದಗಿಸಲಾಗುವುದು ಎಂದಿದೆ. ಈ ವರದಿ ಲೆಫ್ಟಿನೆಂಟ್ ಗವರ್ನರ್ ಕೈಸೇರಿದೆ.