ಕ್ರೇಜಿಸ್ಟಾರ್ ರವಿಚಂದ್ರನ್ ಅವರ “ಅಪೂರ್ವ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾಗಿರುವ ಅಪೂರ್ವ ಈಗ ಬಿಝಿಯಾಗುತ್ತಿದ್ದಾರೆ. ಸದ್ಯ ಅಪೂರ್ವ ನಟಿಸಿರುವ “ಕೃಷ್ಣ ಟಾಕೀಸ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಇದರ ನಡುವೆಯೇ ಅಪೂರ್ವ ಮತ್ತೂಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು “ಕಾಲಾ ಪತ್ಥರ್’. ವಿಕ್ಕಿ ನಾಯಕರಾಗಿರುವ ಈ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿದ್ದು ಚಿತ್ರತಂಡ ಭಾನುವಾರ ಫಸ್ಟ್‌ಲು ರಿವೀಲ್ ಮಾಡಿದೆ.
ಇದನ್ನೂ ಓದಿ:ದಿಗಂತ್-ಐಂದ್ರಿತಾ ಈಗಾಗಲೇ ಪೋಷಕರಾಗಿದ್ದಾರಂತೆ!
ಇನ್ನು, ಚೇತನ್ ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನವೀನ್ ಈ ಚಿತ್ರದ ನಿರ್ಮಾಪಕರು.ನಾಯಕ ನಟ ವಿಕ್ಕಿ ಕೂಡಾ ಈ ಚಿತ್ರದ ಬಗ್ಗೆ ಎಕ್ಸೆ„ಟ್ ಆಗಿದ್ದಾರೆ. “ಒಂದು ವಿಭಿನ್ನ ಕಥೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದು, ವಿಶಿಷ್ಟ ಪಾತ್ರ ನನ್ನನ್ನು ಆವರಿಸಿಕೊಂಡಿದೆ’ ಎಂದು ಖುಷಿಯಿಂದ ಹೇಳುತ್ತಾರೆ.
ವಿಕ್ಕಿ ಈ ಹಿಂದೆ ಸೂರಿ ನಿರ್ದೇಶನದ “ಕೆಂಡಸಂಪಿಗೆ’ ಮೂಲಕ ಚಿತ್ರರಂಗಕ್ಕೆ ನಾಯಕರಾಗಿ ಪರಿಚಯವಾಗಿದ್ದರು. ಆ ನಂತರ “ಕಾಲೇಜ್ ಕುಮಾರ್’ ಚಿತ್ರದಲ್ಲೂ ನಟಿಸಿದ್ದರು. ಈಗ “ಕಾಲಾ ಪತ್ಥರ್’ ಚಿತ್ರದ ಮೂಲಕ ಮತ್ತೆ ಹೊಸ ಸಿನಿಮಾದತ್ತ ಮುಖ ಮಾಡಿದ್ದಾರೆ.
ಇನ್ನು, ನಟಿ ಅಪೂರ್ವ ಅವರಿಗೆ “ಕೃಷ್ಣ ಟಾಕೀಸ್’ ಚಿತ್ರದಲ್ಲೂ ಒಳ್ಳೆಯ ಪಾತ್ರ ಸಿಕ್ಕಿದ್ದು, ಈ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದೆರಡು ಸಿನಿಮಾಗಳನ್ನು ಅಪೂರ್ವ ಒಪ್ಪಿಕೊಂಡಿದ್ದಾರೆನ್ನಲಾಗಿದೆ