Advertisement
ಸದಸ್ಯ ಮಹೇಶ್ ರೈ ಅಂಕೊತ್ತಿಮಾರ್ ವಿಷಯ ಪ್ರಸ್ತಾಪಿಸಿ, ಸದಸ್ಯರಿಗೆ ಸಭಾಭತ್ತೆ ಹೆಚ್ಚಿಸಬೇಕು ಎಂದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ಸಭಾಭತ್ತೆಯ ಬದಲು ಗೌರವಧನ ಎಂದು ಕೇಳಬಹುದು. ಈ ಕುರಿತು ಸಾಮಾನ್ಯ ಸಭೆಯ ನಿರ್ಣಯ ಕೈಗೊಂಡು, ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಆಡಳಿತ ಕಚೇರಿಯಲ್ಲಿರುವ ಜೆರಾಕ್ಸ್ ಯಂತ್ರಕ್ಕೆ ಡ್ರಮ್, ಡೆವಲಪರ್, ಟೋನರ್ ಅಳವಡಿಸಿ ಸರ್ವಿಸ್ ಮಾಡುವ ಕುರಿತು ಈಗಾಗಲೇ ಬಂದಿರುವ ದರಪಟ್ಟಿಗಳ ಕುರಿತು ನಿರ್ಣಯಕ್ಕೆ ಸಭೆ ಮುಂದಿಡಲಾಯಿತು. ಮಂಗಳೂರಿನ ಜೆರೋಟೆಕ್ ಕನ್ಸಲ್‌ಟೆಂಟ್ಸ್‌ಗೆ 12,378 ರೂ., ಮಂಗಳೂರು ಎಸ್.ಎಸ್. ಎಂಟರ್‌ಪ್ರೈಸಸ್‌ಗೆ 12,551 ರೂ., ಮಂಗಳೂರು ಕಂಪ್ಯೂಟರ್ ರಿನೈಸೆನ್ಸ್‌ಗೆ 12,698 ರೂ. ಮೊತ್ತಕ್ಕೆ ಟೆಂಡರ್ ನೀಡಲಾಯಿತು. ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಳೆಗಿಡಗಳನ್ನು ತೆಗೆಯುವ, ಚರಂಡಿಯ ಹೂಳನ್ನು ತೆಗೆದು ಸ್ವತ್ಛಗೊಳಿಸುವ ಕಾಮಗಾರಿಗೆ ಸಮಿತಿಯಿಂದ ಟೆಂಡರ್ ಆಹ್ವಾನಿಸಲು ಸಭೆಯ ಮುಂದಿಡಲಾಯಿತು. ಲೋಕೋಪಯೋಗಿ ಗುತ್ತಿಗೆದಾರರಾದ ಜಯಕುಮಾರ್ 99,643 ರೂ.ಗೆ ನೀಡಿದ ಮೊತ್ತಕ್ಕೆ ಟೆಂಡರ್ ಅಂತಿಮಗೊಳಿ ಸಲಾಯಿತು.
Related Articles
ಪುತ್ತೂರು ಎಪಿಎಂಸಿ ಸಮಿತಿಯ ಈ ಅವಧಿ ಕೊನೆಯಾಗುತ್ತಾ ಬಂದಿದ್ದು, ಸಮಿತಿಯ ಕೊನೆಯ ಸಭೆ ಎ. 15ಕ್ಕೆ ನಿಗದಿ ಪಡಿಸಲಾಗಿದೆ. ಈ ನಡುವೆ ಪುತ್ತೂರು ಜಾತ್ರೆಯೂ ನಡೆಯುವುದರಿಂದ ಎ. 15ಕ್ಕೆ ದಿನ ನಿಗದಿ ಮಾಡುವುದು ಸೂಕ್ತ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement