Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಖಂಡನೆ

09:33 AM May 15, 2020 | Suhan S |

ಹುಬ್ಬಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ವ್ಯಾಪಾರಸ್ಥರು, ರೈತರನ್ನು ಮೂಲೆಗುಂಪು ಮಾಡುವ ಹುನ್ನಾರ ಹಾಗೂ ರೈತರ ಬೆನ್ನಿಗೆ ಚೂರಿ ಹಾಕುವ ತಂತ್ರವಾಗಿದೆ ಎಂದು ಕೆಪಿಸಿಸಿ ವಿಶ್ಲೇಷಕ ವೇದವ್ಯಾಸ ಕೌಲಗಿ ಖಂಡಿಸಿದ್ದಾರೆ.

Advertisement

ಕೋವಿಡ್ ವೈರಸ್‌ನಿಂದ ತತ್ತರಿಸಿ ಈಗಾಗಲೇ ನೂರಾರು ರೈತರು ತಾವು ಬೆಳೆದ ಹಣ್ಣು, ಹೂ, ಕಾಯಿಪಲ್ಲೆಗಳನ್ನು ಸಾಕಾಣಿಕೆ ಮಾಡಲಾಗದೆ ಬೀದಿಗೆ ಸುರಿದಿದ್ದಾರೆ. ಇನ್ನು ಕೆಲವರು ಹಾನಿ ಅನುಭವಿಸಲಾರದೆ, ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ರೈತರು ತಾವು ಬೆಳೆದ ಬೆಳೆಗೆ ಯಾರು ಹೆಚ್ಚು ಬೆಲೆ ನೀಡುತ್ತಾರೋ ಅವರಿಗೆ ಮಾರಾಟ ಮಾಡುವ ವ್ಯವಸ್ಥೆ ಕೂಡ ಜಾರಿಯಲ್ಲಿದೆ. ಆದರೆ ಈಗ ಕೇಂದ್ರ ಸರಕಾರ ದಲ್ಲಾಳಿಗಳ ನೆಪದಲ್ಲಿ ನೇರವಾಗಿ ಕೃಷಿ ಮಾರುಕಟ್ಟೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ವ್ಯಾಪಾರಸ್ಥರು, ರೈತರನ್ನು ಮೂಲೆಗುಂಪು ಮಾಡಲು ಹೊರಟಿದೆ. ಎಪಿಎಂಸಿಗೆ ತಿದ್ದುಪಡಿ ಕರಾಳ ಶಾಸನವಾಗಿದೆ. ಕಾರಣ ಈ ತಿದ್ದುಪಡಿ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next