Advertisement

ಅಪಾರ್ಟ್‌ಮೆಂಟ್‌-ಕಾಂಪ್ಲೆಕ್ಸ್‌, ಶೌಚಾಲಯ ನಿರ್ಮಿಸಿ

01:15 PM Mar 04, 2017 | |

ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯ ನಿವೇಶನಗಳಲ್ಲಿ ವಾಣಿಜ್ಯ ಸಂಕೀìಣ, ಅಪಾರ್ಟ್‌ಮೆಂಟ್‌ ನಿರ್ಮಾಣ, ಕಂದಾಯ, ಸೇವಾ ಶುಲ್ಕ ವಸೂಲಿಗೆ ಬಿಗಿ ಕ್ರಮದ ಮೂಲಕ ಆದಾಯ ಕ್ರೂಢೀಕರಣ, ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಸುಲಭ ಶೌಚಾಲಯ ನಿರ್ಮಾಣ, ಮಹಿಳಾ ಸಬಲೀಕರಣಕ್ಕೆ ಒತ್ತು… 

Advertisement

ಇವು, ಶುಕ್ರವಾರ ಮೇಯರ್‌ ರೇಖಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಪಾಲಿಕೆಯ 2017-18 ನೇ ಸಾಲಿನ ಆಯ-ವ್ಯಯ ತಯಾರಿಸುವ ಬಗ್ಗೆ ಸಂಘ ಸಂಸ್ಥೆಗಳು ಮತ್ತು ಆಸಕ್ತ ಸಾರ್ವಜನಿಕರು ನೀಡಿದ ಸಲಹೆ. 

ಪೌರ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎನ್‌. ನೀಲಗಿರಿಯಪ್ಪ ಮಾತನಾಡಿ, ಮಾರುಕಟ್ಟೆಯಲ್ಲಿರುವ ಅಂಗಡಿಗಳಿಂದ ಸರಿಯಾಗಿ ಬಾಡಿಗೆ ಸಂಗ್ರಹವಾಗುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಪಾಲಿಕೆಯ ತುಂಡು ನಿವೇಶನಗಳು ಅನಧಿಧಿಕೃತವಾಗಿ ಪರರ ಪಾಲಾಗುತ್ತಿವೆ.

ತುಂಡು ನಿವೇಶನ ಗುರುತಿಸಿ, ಅನ್ಯರ ಪಾಲಾಗದಂತೆ ನಿಗಾ ವಹಿಸಬೇಕು. ಸುಲಭ ಶೌಚಾಲಯ ನಿರ್ಮಾಣ, ಶವ ಸಾಗಿಸುವ ವಾಹನ ವ್ಯವಸ್ಥೆಯಾಗಬೇಕು ಹಾಗೂ ಪೌರಕಾರ್ಮಿಕರ ಅಗತ್ಯ ಬಳಕೆ ವಸ್ತುಗಳಾದ ತಟ್ಟೆ, ಕೊಳಗ ಇತರೆ ಅಗತ್ಯ ವಸ್ತುಗಳಿಗೆ ಬಜೆಟ್‌ಲ್ಲಿ ಅನುದಾನ ಮೀಸಲಿಡಬೇಕು ಎಂದರು. 

ನಗರಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್‌ ಮಾತನಾಡಿ, ಈಗ ನಗರಪಾಲಿಕೆಯ ಆದಾಯ 38- 40 ಕೋಟಿ ಇದೆ. 2017-18 ನೇ ಸಾಲಿನಲ್ಲಿ 60-70 ಕೋಟಿ ರೂ. ಸಂಗ್ರಹಕ್ಕೆ ಆದಾಯ, ಸಂಪನ್ಮೂಲ ಕ್ರೂಡೀಕರಿಸುವ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಕಾಯ್ದೆ ಮೀರಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಕಡಿವಾಣ ಹಾಕಬೇಕು.

Advertisement

ವಾಣಿಜ್ಯ ಮಳಿಗೆಗಳಲ್ಲಿರುವ ಅನಧಿಕೃತ ನಲ್ಲಿಗಳ ಸಂಪರ್ಕ ಕಡಿತಗೊಳಿಸಬೇಕು. ನರ್ಸಿಂಗ್‌ ಹೋಮ್‌ಗಳು ಒಂದರಿಂದ ಒಂದೂವರೆ ಸಾವಿರ ರೂ. ನೀಡಿ ಲೈಸನ್ಸ್‌ ತೆಗೆದುಕೊಂಡ ನಂತರ ಪಾಲಿಕೆಯೇ ಶುಚಿತ್ವದ ಸರ್ವ ಜವಾಬ್ದಾರಿ ವಹಿಸಬೇಕಿದೆ. ನಗರದಲ್ಲಿ 120 ರಿಂದ 150 ನರ್ಸಿಂಗ್‌ ಹೋಮ್‌ಗಳಿಂದ ವಾರ್ಷಿಕ 15 ಸಾವಿರ ಸೇವಾ ಶುಲ್ಕ ಸಂಗ್ರಹಿಸುವ ವ್ಯವಸ್ಥೆ ಆಗಬೇಕು.

ರಸ್ತೆ ಬದಿ ಸೈಕಲ್‌ ಮತ್ತು ವಾಕಿಂಗ್‌ ಪಾಥ್‌, ಶೌಚಾಲಯ, ಸಿಟಿ ಬಸ್‌ ನಿಲ್ದಾಣ ಪಾಯಿಂಟ್‌, ಪೌರಕಾರ್ಮಿಕರಿಗೆ ಅಗತ್ಯ ಸಾಮಗ್ರಿ, ಅಂಗವಿಕಲರಿಗೆ, ಕ್ರೀಡಾಪಡುಗಳಿಗೆ ಅನುಕೂಲವಾಗುವ ಬಜೆಟ್‌ ತಯಾರಿಸಬೇಕು  ಎಂದು ಸಲಹೆ ನೀಡಿದರು.

ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಎಂ. ಹಾಲೇಶ್‌ ಮಾತನಾಡಿ, ಪೌರಕಾರ್ಮಿಕರಿಗೆ ವಿಶೇಷ ಬಜೆಟ್‌ ತಯಾರಿಸಲಾಗುವುದು, ಸರ್ವ ಜನಾಂಗದವರ ಸ್ಮಶಾನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಲ್ಲಕ್ಕಿಂತಲೂ ಮುಖ್ಯವಾಗಿ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿಯದಂತೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next