Advertisement

ಆತಂಕ ಮೂಡಿಸಿದ ಸೋಂಕಿತನ ಹಿಸ್ಟರಿ

05:35 PM Apr 27, 2020 | mahesh |

ತುಮಕೂರು: ಇಡೀ ಜಗತ್ತನ್ನೇ ಭೀತಿಗೊಳಿಸಿ ನಮ್ಮ ದೇಶದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ವೈರಸ್‌ ರಾಜ್ಯದಲ್ಲಿ ಕದಂಬ ಬಾಹು ಹೆಚ್ಚಿಸಿ ಕೊಳ್ಳುತ್ತಿರುವ ಈ ಮಹಾ ಮಾರಿಯಿಂದ ಕಲ್ಪತರು ನಾಡು ಮುಕ್ತಿ ಹೊಂದಿತು ಎಂದು ನಿರಾಳರಾಗಿದ್ದ ಜನರಿಗೆ ಮತ್ತೆ ಆತಂಕ ಸೃಷ್ಟಿಸುವಂತೆ ಕೋವಿಡ್‌-19ರ ಸೋಂಕಿತ ಪಿ-447 ವ್ಯಕ್ತಿ ನಗರದ ಮರಳೂರು ದಿಣ್ಣೆ ಮತ್ತು ಮಂಡಿಪೇಟೆಯಲ್ಲಿ ಹಲವು ಬಾರಿ ಸುತ್ತಾಡಿರುವುದು ನಗರದ ನಾಗರಿಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಮೊದಲ ಬಾರಿಗೆ ದೆಹಲಿಗೆ ಹೋಗಿಬಂದಿದ್ದ ಶಿರಾ ವೃದ್ಧನಿಗೆ ಕೋವಿಡ್ ಕಾಣಿಸಿಕೊಂಡು ಆತ ಮೃತಪಟ್ಟ, ಆನಂತರ ಅವರ 13 ವರ್ಷದ ಮಗನಿಗೆ ಸೋಂಕು ಕಾಣಿಸಿ ಕೊಂಡಿತು, ಆತ ಗುಣಮುಖನಾಗಿ ಬಂದು 25 ದಿನಗಳವರೆಗೂ ಯಾವುದೇ ಸೋಂಕು ಜಿಲ್ಲೆಯಲ್ಲಿ ಕಂಡು ಬರದ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಕೋವಿಡ್  ತೊಲಗಿತು ಎಂದು ನಿರಾಳರಾಗಿದ್ದರು. ಆದರೆ ಗುಜರಾತ್‌ ಮೂಲದ ಧರ್ಮ ಪ್ರಚಾರಕ ನಗರದ ಪಿ.ಎಚ್‌.ಕಾಲೋನಿ ಮಸೀದಿಯಲ್ಲಿ ತಂಗಿದ್ದ ಆತನಿಗೆ ಸೋಂಕು ತಗಲಿರು ವುದೇ ಈಗ ನಗರದ ಜನರನ್ನು ಬೆಚ್ಚಿ ಬೀಳಿ ಸುತ್ತಿದೆ. ಈ ಧರ್ಮಪ್ರಚಾರಕ ಪಿ-447ರ ಸೋಂಕಿತ ನಗರದ ವಿವಿಧ ಕಡೆ ಪ್ರವಾಸ ಮಾಡಿದ್ದಾರೆ. ಪ್ರಮುಖವಾಗಿ ಮರಳೂರು ದಿಣ್ಣೆ ಮತ್ತು ಮಂಡಿಪೇಟೆಗೆ ಹೆಚ್ಚು ಸಂಚಾರ ಮಾಡಿರುವುದೇ ಜನರಲ್ಲಿ ಭೀತಿ ಹೆಚ್ಚಲು ಕಾರಣವಾಗಿದೆ ಎಂದರು.

ಈ ಎರಡು ಪ್ರದೇಶಗಳಿಗೆ ಆಶಾ ಮತ್ತು ಆರೋಗ್ಯ ಸಿಬ್ಬಂದಿ ಪ್ರತಿನಿತ್ಯ ಮನೆಮನೆಗೆ ತೆರಳಿ ಜ್ವರ, ಕೆಮ್ಮು ಮತ್ತು ಶೀತ ಸೇರಿದಂತೆ ರೋಗ ಲಕ್ಷಣಗಳಿರುವ ಬಗ್ಗೆ ಸಮೀಕ್ಷೆ ನಡೆಸ
ಲಿದ್ದಾರೆ. ಸಂಪೂರ್ಣ ಸೀಲ್‌ಡೌನ್‌ ಆಗಿರುವ ಪಿ.ಎಚ್‌.ಕಾಲೋನಿಯನ್ನು ಕಂಟೈನ್‌ಮೆಂಟ್‌ ಝೋನ್‌ ಆಗಿ ಪರಿವರ್ತಿಸಲಾಗಿದೆ. ಈ ಪ್ರದೇಶ ದಲ್ಲಿ 452 ಮನೆಗಳಿವೆ. 1900ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಇನ್ನು ಈತ ಪ್ರವಾಸ ಮಾಡಿರುವ ಮಂಡಿ ಪೇಟೆ ಮತ್ತು ಮರಳೂರು ದಿಣ್ಣೆ ಹೆಚ್ಚು ಜನ ನಿಬಿಡ ಪ್ರದೇಶವಾಗಿದೆ ಇದನ್ನು ಬಫ‌ರ್‌ ಜೋನ್‌ ಎಂದು ಪರಿಗಣಿಸಲಾಗಿದ್ದು ಇಲ್ಲಿದ್ದ
ಕೆಲವರನ್ನು ತಪಾಸಣೆಗೆ ಒಳಪಡಿಸಲಾಗಿದೆ ಇದು ಜನರಲ್ಲಿ ಹೆಚ್ಚು ಆತಂಕ ಮೂಡಲು ಕಾರಣವಾಗಿದೆ.

ಜಿಲ್ಲೆಯಲ್ಲಿಗ ಹೋಂ ಕ್ವಾರೆಂಟೈನ್‌ನಲ್ಲಿ 370, ಐಸೋಲೇಷನ್‌ನಲ್ಲಿ 480, ಆಸ್ಪತ್ರೆಯ ಐಸೋಲೇಷನ್‌ನಲ್ಲಿ 90 ಮಂದಿ ಇದ್ದಾರೆ. ಇದುವರೆಗೆ 1437 ಜನರ ಗಂಟಲುಸ್ರಾವ ಮಾದರಿ ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 1170 ಮಾದರಿಗಳು ನೆಗೆಟಿವ್‌ ಎಂದು ದೃಢಪಟ್ಟಿದೆ. ಇನ್ನೂ 252 ತಪಾಸಣೆಯ ವರದಿ ಬಾಕಿ ಇದ್ದು ಯಾರಲ್ಲಿ ಕೋವಿಡ್ ವಕ್ಕರಿಸಿದೆ
ಎನ್ನುವ ಭೀತಿ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಕೋವಿಡ್ ಸೋಂಕಿತ ಪಿ-447 ಇದ್ದ ಪಿ.ಎಚ್‌. ಕಾಲೋನಿಯನ್ನು ಕಂಟೈನ್‌ಮೆಂಟ್‌ ಜೋನ್‌ ಆಗಿ ಪರಿವರ್ತಿಸಿದ್ದು, ಈ ಪ್ರದೇಶದಲ್ಲಿ 452 ಮನೆಗಳಿವೆ. 1900ಕ್ಕೂ ಹೆಚ್ಚು ಜನರು ವಾಸವಿದ್ದು ಜನರು ಹೆಚ್ಚು ಸಹಕಾರ ನೀಡಬೇಕು. ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೊರಗಡೆಯಿಂದ ಪೂರೈಸಲಾಗುತ್ತದೆ. ಈ ವಸ್ತುಗಳನ್ನು ಕಂಟೈನ್‌ಮೆಂಟ್‌ ವಲಯದಲ್ಲಿಯೇ ಇರುವ 15 ಮಂದಿ ಸ್ವಯಂ ಸೇವಕರ ಮೂಲಕ ಹಂಚಿಕೆ ಮಾಡಲಾಗುತ್ತದೆ.
●ಡಾ.ಕೆ.ರಾಕೇಶ್‌ಕುಮಾರ್‌, ಡೀಸಿ

Advertisement

●ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next