Advertisement

ಹತ್ತಿ ಬೆಳೆದವರಲ್ಲಿ ಆತಂಕ

05:31 PM Apr 14, 2020 | mahesh |

ಯಾದಗಿರಿ: ಕೋವಿಡ್-19 ರಾಕ್ಷಸ ಹತ್ತಿ ಬೆಳೆದ ರೈತರಲ್ಲಿಯೂ ಆತಂಕ ಸೃಷ್ಟಿಸಿದ್ದು, ಹತ್ತಿ ಕಟಾವು ಮಾಡಿ ಸಂಗ್ರಹಿಸಿದ್ದ ರೈತರು ಲಾಕ್‌ ಡೌನ್‌ನಿಂದ ಮಾರಾಟ ಮಾಡಲಾಗದೇ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 9 ಸಾವಿರ ಟನ್‌ ಹತ್ತಿ ಬೆಳೆಯುವ ಮಾಹಿತಿ ಲಭ್ಯವಾಗಿದೆ. ಹತ್ತಿ ಕಟಾವು ಮಾಡಿ 6 ತಿಂಗಳು ಕಳೆದಿದ್ದು, ಶೇ.70 ರೈತರು ಈಗಾಗಲೇ ಮಾರಿದ್ದಾರೆ. ಇನ್ನು ಶೇ.30 ರೈತರು ಎರಡನೇ ಬಾರಿಗೆ ಬರುವ ಫಸಲು
ಸೇರಿಸಿ ಒಟ್ಟಿಗೆ ಮಾರುವ ಚಿಂತಿಸಿದ್ದವರು ಈಗ ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಮೇಲಾಗಿ ಕೆಲ ದಿನಗಳ ಹಿಂದೆ ಕೆಲ ತಾಲೂಕುಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಸಂಗ್ರಹಿಸಿದ ಬೆಳೆ ಎಲ್ಲಿ ಹಾನಿಯಾಗುತ್ತದೋ ಎನ್ನುವ ಆತಂಕವೂ ಮನೆ ಮಾಡಿದೆ. ಆರಂಭದಲ್ಲಿ ರೈತರಿಗೆ ಸೂಕ್ತ ಬೆಲೆ ಸಿಗದೇ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಎಚ್ಚೆತ್ತು ಹತ್ತಿಗೆ ಸೂಕ್ತ ಬೆಲೆ ಒದಗಿಸುವ ನಿಟ್ಟಿನಲ್ಲಿ ಭಾರತೀಯ ಹತ್ತಿ ನಿಗಮದಿಂದ ಖರೀದಿಗೆ ವ್ಯವಸ್ಥೆ ಕಲ್ಪಿಸಿತ್ತು.

ಯಾರಿಗೆ ಮಾರಬೇಕೆನ್ನುವ ಚಿಂತೆ:
ನಿಗಮದಿಂದ ನೋಂದಣಿಯಾದ 2943 ರೈತರಿಂದ 15,496 ಕ್ವಿಂಟಲ್‌ ಹತ್ತಿ ಖರೀದಿಸಿ, 57.48 ಕೋಟಿ ಹಣ ರೈತರಿಗೆ ಪಾವತಿಸಿದೆ. ಆದರೆ ಫೆಬ್ರವರಿ ವೇಳೆಗೆ ಹತ್ತಿ ಮಾರಾಟಕ್ಕೆ ರೈತರು ಬರದಿರುವುದರಿಂದ ನಿಗಮದ ಅಧಿಕಾರಿಗಳು ಖರೀದಿ ನಿಲ್ಲಿಸಿದ್ದು, ಇದೀಗ ರೈತರು ಯಾರಿಗೆ ಬೆಳೆ ಮಾರಬೇಕೆನ್ನುವ ಚಿಂತೆಯಲ್ಲಿದ್ದಾರೆ. ಮಿಲ್‌ಗ‌ಳಿಗಾದರೂ ಮಾರಬೇಕೆಂದರೆ ಲಾಕ್‌ಡೌನ್‌ ಹಿನ್ನೆಲೆ ಎಲ್ಲ ಮಿಲ್‌ಗ‌ಳು ಬಂದ್‌ ಆಗಿದ್ದು, ಇತರೆ ರಾಜ್ಯದ ತಾಂತ್ರಿಕ ಕಾರ್ಮಿಕರು ಸೇರಿ ಹಮಾಲರ ಕೆಲಸಕ್ಕೂ ಬ್ರೇಕ್‌ ಬಿದ್ದಿರುವುದು ಮಿಲ್‌ನವರು ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಇರುವುದರಿಂದ ಅಧಿಕಾರಿಗಳಿಗೂ ತಲೆನೋವಾಗಿದೆ. ಇತ್ತ ಹತ್ತಿ ಬೆಳೆದ ರೈತರಿಂದ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಒತ್ತಡ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಮಿಲ್‌ ಮಾಲೀಕರ ಮನವೊಲಿಸಿ ರೈತರಿಗೆ ವ್ಯವಸ್ಥೆ
ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶನದಂತೆ ಕೃಷಿ ಮಾರುಕಟ್ಟೆ ಇಲಾಖೆ ಕಾರ್ಯದರ್ಶಿ ಪ್ರಯತ್ನದಲ್ಲಿ ತೊಡಗಿದ್ದು ಶಹಾಪುರ ಹತ್ತಿ ಮಿಲ್‌ಗ‌ಳಿಗೆ ಭೇಟಿ ನೀಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಸಿಸಿಐಗೂ ಕೊರೊನಾ ಭೀತಿ: ಈ ಹಿಂದೆ ಭಾರತೀಯ ಹತ್ತಿ ನಿಗಮದಿಂದ ರೈತರಿಂದ ಹತ್ತಿ ಖರೀದಿಸಲಾಗಿದೆ. ಆದರೆ ಈಗ ರೈತರಿಂದ ಬೇಡಿಕೆಯಿದ್ದು ಖರೀದಿ ಕೇಂದ್ರ ಆರಂಭಿಸುವಂತೆ ಕೃಷಿ ಮಾರುಕಟ್ಟೆ ಅಧಿಕಾರಿ ಸಿಸಿಐ ಅ ಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೊರೊನಾ ಭೀತಿ ಎದುರಾಗಿದೆ. ತಾಂತ್ರಿಕ ಕಾರ್ಮಿಕರು, ಕೆಲಸ ಮಾಡುವ ಕಾರ್ಮಿಕರೂ ಬೇಕು. ಕೊರೊನಾ ಆವರಿಸಿದೆ ನಾವು ಸಹಿ ಮಾಡಿಸಿ ಕೊಳ್ಳುವುದು ರೈತರೊಂದಿಗೆ ನಿಕಟವಾಗಿ ವ್ಯವಹರಿಸಬೇಕಾಗುತ್ತದೆ. ಹಾಗಾಗಿ ಕೋವಿಡ್-19  ಹರಡುವ ಆತಂಕದಿಂದ ಸದ್ಯ ಖರೀದಿ ಕೇಂದ್ರ ಆರಂಭಿಸುವುದು ಸಾಧ್ಯವಾಗದ ಮಾತು
ಎನ್ನುವ ಮಾಹಿತಿ ಲಭ್ಯವಾಗಿದೆ.

ಕಡಿಮೆ ಬೆಲೆ ಸಿಗುವ ಭಯ: ಸಿಸಿಐನಿಂದ ಖರೀದಿಸಿದರೆ ನ್ಯಾಯಯುತ ಬೆಲೆ ಸಿಗಲು ಸಾಧ್ಯ. ಒಂದು ವೇಳೆ ಖಾಸಗಿ ಮಿಲ್‌ಗ‌ಳಲ್ಲಿ ಮಾರಿದರೆ ಕಡಿಮೆ ದರ ಸಿಗುವ ಭಯವೂ ರೈತರಿಗಿದೆ. ಸದ್ಯದ ಪರಿಸ್ಥಿತಿಯಲ್ಲಿ ತೀವ್ರ ಸಂಕಷ್ಟದಲ್ಲಿರುವ ರೈತರು ಹೇಗಾದರೂ ಮಾಡಿ ಹತ್ತಿ ಮಾರಾಟವಾದರೆ ಸಾಕು ಎನ್ನುವ
ಮನಸ್ಥಿತಿಗೆ ಬಂದಿದ್ದು ಜಿಲ್ಲಾಡಳಿತ ರೈತರಿಗೆ ಅನ್ಯಾಯವಾಗದಂತೆ ಕಾಳಜಿ ವಹಿಸಬೇಕಿದೆ.

Advertisement

ಸಿಸಿಐನಿಂದ ಹತ್ತಿ ಖರೀದಿಸಿದ್ದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತಾಯಿತು. ಇನ್ನುಳಿದ ರೈತರಿಂದಲೂ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಸಹಾಯವಾಗಲಿದೆ. ರೈತರು ಬೆಳೆದು ಸುಮ್ಮನೇ ಕೂಡಬಾರದು. ಅಗತ್ಯ ಮಾರುಕಟ್ಟೆ ಜ್ಞಾನ ಮತ್ತು ವ್ಯವಹಾರದ ಬಗ್ಗೆ ತಿಳಿದುಕೊಂಡು ಮಧ್ಯವರ್ತಿಗಳಿಂದ ರಕ್ಷಿಸಿಕೊಳ್ಳಬೇಕಿದೆ.
ಮಲ್ಲಿಕಾರ್ಜುನ ಸತ್ಯಂಪೇಟ್‌, ರಾಜ್ಯ ರೈತ ಸಂಘದ ಮುಖಂಡರು

ಜಿಲ್ಲೆಯ ಕೆಲವು ರೈತರಿಂದ ಹತ್ತಿ ಖರೀದಿ ಕೇಂದ್ರಕ್ಕೆ ಬೇಡಿಕೆಯಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ರೈತರಿಂದ ಹತ್ತಿ ಖರೀದಿಗೆ ಅನುಕೂಲವಾಗುವಂತೆ
ವ್ಯವಸ್ಥೆ ಕಲ್ಪಿಸುವ ಪ್ರಯತ್ನದಲ್ಲಿದ್ದೇವೆ. ಸದ್ಯ ಶಹಾಪುರದಲ್ಲಿ ಮಿಲ್‌ಗ‌ಳಿಗೆ ಭೇಟಿ ನೀಡಿ ಖರೀದಿ ಆರಂಭಿಸುವಂತೆ ತಿಳಿಸಲಾಗಿದೆ. ಕೆಲವೇ ದಿನಗಳಲ್ಲಿ ಕನಿಷ್ಟ 4-5 ಮಿಲ್‌ಗ‌ಳಲ್ಲಿ ಆದರೂ ಖರೀದಿ ಆರಂಭಿಸಿ ಅನುಕೂಲ ಮಾಡಲಾಗುವುದು.
ಭೀಮರಾಯ,  ಕೃಷಿ ಮಾರುಕಟ್ಟೆ ಕಾರ್ಯದರ್ಶಿ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next