Advertisement
ಹೀಗಿರುವಾಗ ಒಮ್ಮೆ ಇಂದ್ರ ಮತ್ತು ಇತರೆ ದೇವತೆಗಳು ಸೇರಿ ತ್ರಿಮೂರ್ತಿಗಳ ಬಳಿಗೆ ಬಂದು ಅನುಸೂಯೆಯ ಪಾತಿವ್ರತ್ಯ ಹಾಗೂ ಪತಿವ್ರತಾ ಶಕ್ತಿಯ ಬಗ್ಗೆ ತಿಳಿಸಿದರು. ತ್ರಿಮೂರ್ತಿಗಳು ಆಶ್ಚರ್ಯದಿಂದ ಸ್ವತಃ ತಾವು ಕಣ್ಣಿಂದ ನೋಡಿ ತಿಳಿಯಬೇಕು ಎಂದು ಅತ್ರಿ ಋಷಿಗಳ ಆಶ್ರಮದ ಕಡೆ ನಡೆದರೂ. ಅತ್ರಿ ಋಷಿಗಳು ಆಶ್ರಮದಲ್ಲಿ ಇಲ್ಲದ ಸಮಯದಲ್ಲಿ ತ್ರಿಮೂರ್ತಿಗಳು ಅನುಸೂಯೆಯನ್ನು ಪರೀಕ್ಷಿಸಲು ಋಷಿವೇಷ ಧರಿಸಿ ಆಶ್ರಮಕ್ಕೆ ಬಂದರು.
Related Articles
Advertisement
ಆಶ್ರಮಕ್ಕೆ ಹಿಂದಿರುಗಿದ ಅತ್ರಿ ಋಷಿಗಳು ಶಿಶುಗಳನ್ನು ಕಂಡು ಆಶ್ಚರ್ಯ ಚಕಿತರಾದರು. ಅನುಸೂಯಾದೇವಿಯು ನಡೆದ ಸಂಗತಿಯನ್ನೆಲ್ಲ ತಿಳಿಸಲು ಅತ್ರಿ ಋಷಿಗಳು ಯೋಗ ದೃಷ್ಟಿಯಿಂದ ಅವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಮೂರು ಶಿಶುಗಳು ತ್ರಿಮೂರ್ತಿ ರೂಪದಿಂದ ದರ್ಶನ ನೀಡಿ, ಅತ್ರಿ ದಂಪತಿಗಳಿಗೆ ಆಶೀರ್ವದಿಸಿ “ನಿಮ್ಮ ಆತಿಥ್ಯದಿಂದ ಸಂತುಷ್ಟರಾಗಿದ್ದೇವೆ ಏನು ವರಬೇಕೋ ಕೇಳಿ ಎಂದು ಹೇಳಿದರು”.
ಅತ್ರಿ ದಂಪತಿಗಳು ತ್ರಿಮೂರ್ತಿಗಳೇ ನಮ್ಮ ಮಕ್ಕಳಾಗಬೇಕು ಎಂಬ ವರ ಬೇಡಿದರು. ಆದ್ದರಿಂದ ತ್ರಿಮೂರ್ತಿಗಳು ಅತ್ರಿ ಅನುಸೂಯ ದಂಪತಿಗಳ ಮಕ್ಕಳಾಗಿದ್ದರು… ಕೆಲ ಕಾಲ ಕಳೆದ ನಂತರ ತಂದೆ ತಾಯಿಯ ಆಶೀರ್ವಾದ ಪಡೆದು ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೂ , ಶಿವನು ದುರ್ವಾಸನಾಗಿ ತಪ್ಪಸ್ಸಿಗೂ ಹೋದರು. ಶ್ರೀಮನ್ ನಾರಾಯಣನು ದತ್ತನಾಗಿ ತಂದೆ ತಾಯಿಯ ಸೇವೆ ಮಾಡುತ್ತ ಅಲ್ಲಿಯೇ ಉಳಿದನು. ಇಂದಿಗೂ ದತ್ತಾತ್ರೇಯನು ಗುರುವಾಗಿ ಬೇರೆ ಬೇರೆ ಅವತಾರದಿಂದ ಭಕ್ತರನ್ನು ಉದ್ದಾರ ಮಾಡುತ್ತಿದ್ದಾನೆ.
ಶ್ರೀಪಾದ ಶ್ರೀವಲ್ಲಭ
ದತ್ತಾತ್ರೇಯನು ಶ್ರೀಪಾದ ಶ್ರೀವಲ್ಲಭರಾಗಿ ಗಣೇಶ್ ಚತುರ್ಥಿ ಯಂದು ಜನಿಸಿದರು ಬಾಲ್ಯದಿಂದಲೇ ಹಲವಾರು ಪವಾಡಗಳನ್ನೂ ತೋರಿಸಿದರು, ಅವರು ಇಂದಿಗೂ ಕುರುವಪುರದಲ್ಲಿ ಸಂಹಿತರಾಗಿದ್ದರೆ ಹಾಗೂ ಪ್ರತಿದಿನ ಭಿಕ್ಷೆ ಸ್ವೀಕರಿಸಲು ಒಂದಲೊಂದು ರೂಪದಲ್ಲಿ ಬರುತ್ತಾರೆ ಎಂಬ ನಂಬಿಕೆ ಇದೆ.
ಶ್ರೀ ನೃಸಿಂಹ ಸರಸ್ವತಿ
ದತ್ತಾತ್ರೇಯನು ಶ್ರೀ ನೃಸಿಂಹ ಸರಸ್ವತಿಯಾಗಿ ಕಾರಂಜಾ ಗ್ರಾಮದಲ್ಲಿ ಜನಸಿದರು. ಮಗು ಹುಟ್ಟಿದಾಗಲೇ ಓಂಕಾರವನ್ನು ಉಚ್ಚರಿಸಿತು. ಉಪನಯನದ ಸಂದರ್ಭದವರೆಗೂ ಓಂಕಾರ ಹೊರತು ಬೇರೇನೂ ಮಾತಾಡದ ಮಗು ಮಾತೃ ಭಿಕ್ಷೆ ಸಮಯದಲ್ಲಿ ನಾಲ್ಕು ವೇದಗಳನ್ನು ಸುಲಲಿತವಾಗಿ ಹೇಳುತ್ತಾ ಎಲ್ಲರಲ್ಲಿ ಆಚಾರಿ ಮೂಡಿಸಿದ. ನಂತರ ಸನ್ಯಾಸಿಯಾಗಿ ದೇಶ ಸಂಚಾರ ಮಾಡುತ್ತ ಭಕ್ತರನ್ನು ಉದ್ಧರಿಸುತ್ತ ಗಾಣಗಾಪುರದ ಭೀಮ-ಅಮರಜ ಸಂಗಮ ಕ್ಷೇತ್ರದ ಬಳಿ ಒಂದು ಒದುಂಬರ ವೃಕ್ಷವಿದೆ ಅಲ್ಲಿ ನೆಲೆಸಿದ್ದರು. ಗಂಗಾಪುರದಲ್ಲಿ ಇಂದಿಗೂ ಪ್ರತಿನಿತ್ಯ ಭಿಕ್ಷೆ ರೂಪದಲ್ಲಿ ಅನ್ನದಾನ ನಡೆಯುತ್ತದೆ. ದತ್ತನು ಯಾವುದಾರೊಂದು ರೂಪದಲ್ಲಿ ಬಂದು ಭಿಕ್ಷೆ ಸ್ವೀಕರಿಸುತ್ತಾನೆಂಬ ನಂಬಿಕೆ ಇದೆ.
ಶ್ರೀ ಗುರುಚರಿತ್ರೆ ಗ್ರಂಥವನ್ನು ಭಕ್ತಿಯಿಂದ ಪಾರಾಯಣ ಮಾಡಿ, ತುಪ್ಪದ ದೀಪ ಹಚ್ಚಿ, ಕರ್ಪೂರದ ಆರತಿ ಮಾಡಿದರೆ. ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ಇಂದಿಗೂ ಇದೆ.