Advertisement

“ಸೈ ರಾ ನರಸಿಂಹ ರೆಡ್ಡಿ”ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ವಾರಿಯರ್!

12:10 PM Jun 01, 2019 | Nagendra Trasi |

ಹೈದರಾಬಾದ್:ನಟಿ ಅನುಷ್ಕಾ ಶೆಟ್ಟಿ ತೆಲುಗಿನ ಸೈ ರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ  ಎಂಬುದು ಈಗಾಗಲೇ ಸುದ್ದಿಯಾಗಿದೆ. ಆದರೆ ಇದೀಗ ಸಿನಿ ಮೂಲಗಳ ಪ್ರಕಾರ ಸೈ ರಾದಲ್ಲಿ ಅನುಷ್ಕಾ ವೀರ ಯೋಧೆಯಾಗಿ
ಕಾಣಿಸಿಕೊಳ್ಳಲಿದ್ದಾಳಂತೆ.

Advertisement

ಆಂಧ್ರಪ್ರದೇಶದ ಉಯ್ಯಾಲಾವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆ ಆಧಾರಿತ ಸಿನಿಮಾ ಇದಾಗಿದೆ. ರೆಡ್ಡಿ ಆಂಧ್ರಪ್ರದೇಶದ ಮೊತ್ತ ಮೊದಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಸೈ ರಾ ನರಸಿಂಹ ರೆಡ್ಡಿ ಸಿನಿಮಾ ಸೆಟ್ಟೆರುತ್ತಿದ್ದಂತೆಯೇ ಸಾಕಷ್ಟು ಕುತೂಹಲಕಾರಿ ಅಂಶಗಳು ಹರಿದಾಡತೊಡಗಿದ್ದವು. ಇದೀಗ ಹೊಸ ಬೆಳವಣಿಗೆಯಲ್ಲಿ ಅನುಷ್ಕಾ ಶೆಟ್ಟಿ ಪಾತ್ರದ ಬಗ್ಗೆಯೇ ಚರ್ಚೆಯಾಗುತ್ತಿದೆ. ಸೈ ರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ತನ್ನ ಪಾತ್ರ ಏನೆಂಬ ಗುಟ್ಟನ್ನು ಅನುಷ್ಕಾ ಈವರೆಗೂ ಬಿಟ್ಟುಕೊಟ್ಟಿಲ್ಲ! ವರದಿಗಳ ಪ್ರಕಾರ ಸೈ ರಾ ಸಿನಿಮಾದಲ್ಲಿ ಅನುಷ್ಕಾ ಪಾತ್ರ ಕ್ಲಿಷ್ಷಕರವಾದದ್ದು ಎಂದೇ ಹೇಳಲಾಗುತ್ತಿದೆ.

ಅನುಷ್ಕಾ ಶೆಟ್ಟಿಯನ್ನು ಸೈ ರಾದಲ್ಲಿ ವಾರಿಯರ್ ಆಗಿ ತೋರಿಸಲಾಗುತ್ತದೆ ಎಂದು ನಿರ್ದೇಶಕ ಸುರೇಂದ್ರ ರೆಡ್ಡಿ ಹೇಳಿದ್ದಾರೆ. ಯುದ್ಧ ಭೂಮಿಯಲ್ಲಿ ಬ್ರಿಟಿಷ್ ಪಡೆಗಳ ಜೊತೆ ಖಡ್ಗವನ್ನು ಝಳಪಿಳಿಸುತ್ತ ಹೋರಾಡುತ್ತಿರುವ ದೃಶ್ಯ ಕಾಣಬಹುದಾಗಿದೆಯಂತೆ. ಸದ್ಯ ಅನುಷ್ಕಾ ಅಮೇರಿಕಾದಲ್ಲಿ ಸೈಲೆನ್ಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next