Advertisement

ಬೇಬಿ ಬಂಪ್ ಚಿತ್ರ ಹಂಚಿಕೊಂಡ ಅನುಷ್ಕಾ: ಕೊಹ್ಲಿ ಹೇಳಿದ್ದೇನು ಗೊತ್ತಾ ?

08:45 PM Sep 13, 2020 | Mithun PG |

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ ತಿಂಗಳು ಅಪ್ಪ-ಅಮ್ಮನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಅನುಷ್ಕಾ ಶರ್ಮ ಇನ್‌ ಸ್ಟಾಗ್ರಾಂನಲ್ಲಿ ಮತ್ತೊಮ್ಮೆ ‘ಬೇಬಿ ಬಂಪ್’ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

Advertisement

ಈ ಚಿತ್ರಕ್ಕೆ ಸುಂದರ ಅಡಿಬರಹ ಕೂಡ ನೀಡಿದ್ದು ‘ನಿಮ್ಮೊಳಗೆ ಜೀವವೊಂದು ರೂಪುಗೊಳ್ಳುವುದನ್ನು ಅನುಭವಿಸುವುದಕ್ಕಿಂತ ಹೆಚ್ಚು ದಿಟ ಮತ್ತು ವಿನಮ್ರವಾದುದು ಯಾವುದೂ ಇಲ್ಲ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ನಿಜಕ್ಕೂ ಅದೇನು?’ ಎಂದು ಅನುಷ್ಕಾ ಶರ್ಮ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ವಿರಾಟ್ ಕೊಹ್ಲಿ ಕೂಡ ಕಮೆಂಟ್ ಹಾಕಿದ್ದು ಸಾಕಷ್ಟು ಗಮನ ಸೆಳೆದಿದೆ. ‘ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಅವರ ಈ ಕಮೆಂಟ್ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದ್ದು, ಅಧಿಕ ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next