Advertisement

ಸ್ವಿಟ್ಸರ್‌ಲ್ಯಾಂಡಿಗೆ ಹಾರಿದ ಕೊಹ್ಲಿ-ಅನುಷ್ಕಾ ಜೋಡಿ !

11:07 AM Dec 09, 2017 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ತಾರೆ ಅನುಷ್ಕಾ ಶರ್ಮ ಮದುವೆ ಆಗಲಿದ್ದಾರೆಂಬ ಸುದ್ದಿ ಹೊಸತೇನಲ್ಲ. ಆದರೆ ಇವರ ಮದುವೆ ಯಾವಾಗ, ಎಲ್ಲಿ ಎಂಬುದೇ ಅಭಿಮಾನಿಗಳನ್ನು ಹಾಗೂ ಮಾಧ್ಯಮದವರನ್ನು ಕಾಡುವ ಪ್ರಶ್ನೆ.

Advertisement

ಇದಕ್ಕೆ ಸಂಬಂಧಿಸಿದ “ಬ್ರೇಕಿಂಗ್‌ ನ್ಯೂಸ್‌’ ಏನಪ್ಪ ಅಂದರೆ, ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರು ಕುಟುಂಬ ಸಮೇತ ರಾಗಿ ಗುರುವಾರ ರಾತ್ರಿ ಸ್ವಿಟ್ಸರ್‌ಲ್ಯಾಂಡಿಗೆ ವಿಮಾನವೇರಿದ್ದು. ಇದರಿಂದ ಇವರ ವಿವಾಹ ಡಿ. 12ರಂದು ಇಟಲಿಯ ಮಿಲಾನ್‌ ನಗರದಲ್ಲಿ ನಡೆಯಲಿದೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಬಲಿತಿದೆ.

ಮುಸುಕು ಹಾಕಿಕೊಂಡಿದ್ದ ಕೊಹ್ಲಿ !
ವಿರಾಟ್‌ ಕೊಹ್ಲಿ ಕುಟುಂಬ ಹೊಸದಿಲ್ಲಿಯಿಂದಲೂ, ಅನುಷ್ಕಾ ಶರ್ಮ ಪರಿವಾರ ಮುಂಬಯಿಯಿಂದಲೂ ಸ್ವಿಟ್ಸರ್‌ಲ್ಯಾಂಡಿಗೆ ತೆರಳಿರುವುದು ಖಾತ್ರಿಯಾಗಿದೆ. “ಇಂಡಿಯಾ ಟುಡೇ’ ವರದಿ ಪ್ರಕಾರ ಕೊಹ್ಲಿ ಗುರುವಾರ ರಾತ್ರಿ 11.30ರ ವೇಳೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕೆಟ್‌ ಧರಿಸಿದ್ದ ಅವರು ಮುಖದ ಅರ್ಧ ಭಾಗಕ್ಕೆ ಮುಸುಕು ಹಾಕಿಕೊಂಡಿದ್ದರು. ತನ್ನನ್ನು ಯಾರೂ ಗುರುತಿಸಬಾರದೆಂಬ ಉದ್ದೇಶ ಇದಾಗಿರ ಬಹುದು. ಜತೆಗೆ ಕೊಹ್ಲಿ ಪರಿವಾರದವರೂ ಇದ್ದರು ಎನ್ನಲಾಗಿದೆ. ಅವರ ವಿಮಾನ 12.45ಕ್ಕೆ ಟೇಕ್‌ಆಫ್ ಆಗಿದೆ. 

ಮುಂಬಯಿಯಲ್ಲಿ ಅನುಷ್ಕಾ ಕುಟುಂಬ
ಇದೇ ವೇಳೆ ಅನುಷ್ಕಾ ಶರ್ಮ ಕುಟುಂಬ ಸಮೇತರಾಗಿ ಮುಂಬಯಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಜತೆಯಲ್ಲಿ ತಂದೆ ಅಜಯ್‌ ಕುಮಾರ್‌, ತಾಯಿ ಆಶಿಮಾ, ಅಣ್ಣ ಕರ್ಣೇಶ್‌ ಕೂಡ ಇದ್ದರು. ಸ್ವಿಟ್ಸರ್‌ಲ್ಯಾಂಡಿನಿಂದ ಎರಡೂ ಪರಿವಾರದವರು ಇಟಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ಗಮನಿಸುವಾಗ ಡಿ. 12ರಂದು ಕೊಹ್ಲಿ-ಅನುಷ್ಕಾ ಮದುವೆ ಮಿಲಾನ್‌ನಲ್ಲಿ ನಡೆಯುವುದು ಬಹುತೇಕ ಖಚಿತವೆನಿಸುತ್ತದೆ.

ಮೂಲವೊಂದರ ಪ್ರಕಾರ, ವಿರಾಟ್‌ ಕೊಹ್ಲಿ ಕುಟುಂಬದವರು ಹಾಗೂ ಅವರ ಆತ್ಮೀಯ ಮಿತ್ರರು ಈಗಾಗಲೇ ಮಿಲಾನ್‌ಗೆ ತೆರಳಲು ವಿಮಾನದ ಟಿಕೆಟ್‌ಗಳನ್ನು ಕಾದಿರಿಸಿದ್ದಾರೆ. ಕೊಹ್ಲಿ ಅವರ ಬಾಲ್ಯದ ಕೋಚ್‌ ರಾಜ್‌ಕುಮಾರ್‌ ಶರ್ಮ ಕೂಡ ಇದೇ ವೇಳೆ ರಜೆಯಲ್ಲಿರುವುದು ಕೂಡ ಈ ಮದುವೆಯ ಸಾಧ್ಯತೆಯನ್ನು ಬಲಗೊಳಿಸುತ್ತದೆ. ದಿಲ್ಲಿ ತಂಡ ಸಿ.ಕೆ. ನಾಯ್ಡು ಟ್ರೋಫಿ ಸೆಮಿಫೈನಲ್‌ನಲ್ಲಿ ಆಡುತ್ತಿದ್ದರೂ ಕೋಚ್‌ ರಾಜ್‌ಕುಮಾರ್‌ ಶರ್ಮ ರಜೆಯಲ್ಲಿ ಹೋಗಿದ್ದು, ರಾಬಿನ್‌ ಸಿಂಗ್‌ ಜೂನಿಯರ್‌ ಕೋಚಿಂಗ್‌ ಜವಾಬ್ದಾರಿ ಹೊತ್ತಿದ್ದಾರೆ.

Advertisement

ಅಡಿಲೇಡ್‌ನ‌ಲ್ಲಿ ಮದುವೆಗೆ ಆಹ್ವಾನ!
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ಮದುವೆಯನ್ನು “ಅಡಿಲೇಡ್‌ ಓವಲ್‌’ನಲ್ಲಿ ಅದ್ಧೂರಿಯಾಗಿ ನಡೆಸಲು ಸಿಇಒ ಆ್ಯಂಡ್ರೂé ಡೇನಿಯಲ್ಸ್‌ ಆಹ್ವಾನ ನೀಡಿರುವುದು ಮತ್ತೂಂದು ಕುತೂಹಲದ ಬೆಳವಣಿಗೆ. 

“ವಿರಾಟ್‌-ಅನುಷ್ಕಾ ಮದುವೆಗೆ ಅಡಿಲೇಡ್‌ ಓವಲ್‌ ಪ್ರಶಸ್ತ ಹಾಗೂ ಅದ್ಭುತ ತಾಣ. ವಿರಾಟ್‌ ಅವರ ಕ್ರಿಕೆಟ್‌ ಬದುಕಿನ ಅದೆಷ್ಟೋ ಸ್ಮರಣೀಯ ಗಳಿಗೆಗೆ ಈ ಅಂಗಳ ಸಾಕ್ಷಿಯಾಗಿದೆ. ಇಲ್ಲಿ ಸಮಾರಂಭಗಳ ಉದ್ದೇಶಕ್ಕೆಂದೇ ನಿರ್ಮಿಸಲಾದ 26 ವೈವಿಧ್ಯಮಯ ಸ್ಥಳಗಳಿವೆ. ಜತೆಗೆ ದಕ್ಷಿಣ ಆಫ್ರಿಕಾದ ರುಚಿಕರ ಖಾದ್ಯ, ವೈನ್‌ಗಳೂ ಇವೆ. ಖಂಡಿತ ಇದು ಕೊಹ್ಲಿಗೆ ಇಷ್ಟವಾಗಲಿದೆ…’ ಎಂದಿದ್ದಾರೆ ಡೇನಿಯಲ್ಸ್‌.

ಮದುವೆ ಮೊದಲಾದ ಖಾಸಗಿ ಸಮಾರಂಭಗಳಿಗೆ ಅಡಿಲೇಡ್‌ ಓವಲ್‌ ಅತ್ಯಂತ ವ್ಯವಸ್ಥಿತವಾಗಿ ರೂಪುಗೊಂಡಿದ್ದು, ಅತಿಥಿ ಗಳಿಗೆ ಕನಿಷ್ಠ 159 ಆಸ್ಟ್ರೇಲಿಯನ್‌ ಡಾಲರ್‌ (8 ಸಾವಿರ ರೂ.) ಮೊತ್ತವನ್ನು ನಿಗದಿಗೊಳಿಸ ಲಾಗುತ್ತದೆ. ಯಾವುದೇ ಸಭಾಂಗಣದಲ್ಲಿ ಕುಳಿತರೂ ಅಡಿಲೇಡ್‌ ಕ್ರೀಡಾಂಗಣ, ಸೇಂಟ್‌ ಪೀಟರ್ ಕ್ಯಾಥಡ್ರಲ್‌ ಹಾಗೂ ಅಡಿಲೇಡ್‌ ನಗರದ ಮೋಹಕ ದೃಶ್ಯವನ್ನು ಕಣ್ತುಂಬಿಸಿ ಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next