Advertisement

ಧಿಕ್ಕಾರ-ಜಯಕಾರದ ಮಧ್ಯೆ ಅಂತ್ಯೋದಯ ಕಲ್ಪನೆ ಅನಿವಾರ್ಯ: ಕೇಂದ್ರ ಸಚಿವ ಸ್ವಾಮಿ

12:40 AM Oct 05, 2021 | Team Udayavani |

ಬಂಟ್ವಾಳ: ಸರಕಾರ ಹಾಗೂ ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡ ಬೇಕಾದ ಸಂಘಟನೆಗಳು ಬರೀ ಧಿಕ್ಕಾರ- ಜಯಕಾರ ಹಾಕುವುದರಲ್ಲೇ ತೊಡಗಿಕೊಂಡಿರುವುದರಿಂದ ಅಂತ್ಯೋದಯ ಕಲ್ಪನೆಯ ಅನಿವಾರ್ಯ ಎದುರಾಗಿದೆ. ಪ್ರತಿನಿಧಿಗಳು ಅಂತ್ಯೋದಯ ಆಶಯವನ್ನು ಗ್ರಾಮದಲ್ಲಿ ಪ್ರಯೋಗಿಸಿದಾಗ ಸಮಾಜದ ಮೇಲೆ ಉತ್ತಮ ಪರಿಣಾಮವಾಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.

Advertisement

ಅವರು ಸೋಮವಾರ ಬಿ.ಸಿ.ರೋಡಿನಲ್ಲಿ ಆಯೋಜನೆಗೊಂಡಿದ್ದ ವಿವಿಧ ಯೋಜನೆಗಳ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರ ಅಂತ್ಯೋದಯವನ್ನು ಉದ್ಘಾಟಿಸಿದರು.

ಅಧಿಕಾರಿಗಳು ಜನರಿಗೆ ಹಕ್ಕುಪತ್ರ-ವಸತಿ ಕೊಡುವ ಕಾರ್ಯ ಮಾಡಬೇಕು. ಯೋಜನೆ ಗಳ ಅನುಷ್ಠಾನ ಉತ್ಸವ-ಹಬ್ಬದ ರೀತಿಯಲ್ಲಿ ಆಗಬೇಕಿದೆ ಎಂದರು.

ಎಲ್ಲ ಜಿಲ್ಲೆಗೂ ವಿಸ್ತರಣೆ
ಸಮಾವೇಶದ ರೂವಾರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದು, ಅಂತ್ಯೋದಯ ಸಮಾವೇಶ ಎಲ್ಲ ಜಿಲ್ಲೆಗೂ ವಿಸ್ತರಣೆಗೊಳ್ಳಲಿದೆ. ರಾಜ್ಯದಲ್ಲಿ 5.50 ಲಕ್ಷ ಮನೆ, 4.50 ಲಕ್ಷ ಕುಟುಂಬಗಳಿಗೆ ನಿವೇಶನ ಇಲ್ಲವಾಗಿದ್ದು, ಅದನ್ನು ಒದಗಿಸುವ ನಿಟ್ಟಿನಲ್ಲಿ ಇದು ಪೂರಕವಾಗಲಿದೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಪ್ರಧಾನಿ ಮೋದಿಯವರು 15ನೇ ಹಣಕಾಸು ಯೋಜನೆಯ ಅನುದಾನ ವನ್ನು ನೇರವಾಗಿ ನೀಡುವ ಮೂಲಕ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಹೆಚ್ಚಿನ ಬಲ ನೀಡಿದ್ದಾರೆ ಎಂದು ತಿಳಿಸಿದರು.

Advertisement

ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಆಯೋಗದ ವರದಿಯ ಆಧಾರದಲ್ಲಿ ಸರಕಾರ ಮೀಸಲಾತಿಯ ತೀರ್ಮಾನ ತೆಗೆದುಕೊಳ್ಳಲಿದೆ. ಗ್ರಾ.ಪಂ. ಸದಸ್ಯರು ತಮ್ಮ ಭಾಗದ ಜಾತಿಯ ವಿವರ ಮೀಸಲಾತಿ ಪಟ್ಟಿಯಲ್ಲಿ ಇಲ್ಲದೇ ಇದ್ದಾಗ ಆಯೋಗದ ಗಮನಕ್ಕೆ ತರಬೇಕು ಎಂದರು.

ಇದನ್ನೂ ಓದಿ:ಅಗ್ರ ಪೈಪೋಟಿಯಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಸಮಾಜದ ಎಲ್ಲರೊಂದಿಗೂ ನಿತ್ಯ ಸಂಪರ್ಕದಲ್ಲಿರುವ ಪಂಚಾಯತ್‌ ಸದಸ್ಯರು ಯೋಜನೆಯ ಮಾಹಿತಿ ಅರಿತಾಗ ಅಂತ್ಯೋದಯದ ಚಿಂತನೆ ಸಾಕಾರ ಸಾಧ್ಯ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಡಿಯೋ ಸಂದೇಶ ನೀಡಿದರು.

ಶಾಸಕರಾದ ಯು.ಟಿ. ಖಾದರ್‌, ಡಾ| ವೈ. ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯರಾದ ಎನ್‌. ರವಿಕುಮಾರ್‌, ಪ್ರತಾಪಸಿಂಹ ನಾಯಕ್‌, ವಿವಿಧ ನಿಗಮಗಳ ಅಧ್ಯಕ್ಷರಾದ ನಿತಿನ್‌ ಕುಮಾರ್‌, ಸಂತೋಷ್‌ ರೈ ಬೋಳಿಯಾರ್‌, ಕೆ. ರವೀಂದ್ರ ಶೆಟ್ಟಿ, ಪ್ರೊ| ಲಿಂಗಣ್ಣ, ಡಿ.ಎಚ್‌. ಅರುಣ್‌, ಹನುಮಂತಪ್ಪ, ತುಂಬೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್‌ ಬಿ. ತುಂಬೆ, ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ| ಎನ್‌. ನಾಗಾಂಬಿಕಾ ದೇವಿ, ಆಯುಕ್ತ ಡಾ| ರವಿಕುಮಾರ್‌ ಸುರಪುರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಪಿ. ವಸಂತ ಕುಮಾರ್‌, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದೇಶ್ವರ ಎನ್‌., ದ.ಕ. ಜಿಲ್ಲಾ ಅಧಿಕಾರಿ ಡಾ| ರಾಜೇಶ್‌ ಕೆ.ವಿ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ| ಯೋಗೀಶ್‌ ಎಸ್‌.ಬಿ. ಉಪಸ್ಥಿತರಿದ್ದರು.

ಜಿ.ಪಂ. ಸಿಇಒ ಡಾ| ಕುಮಾರ್‌ ಸ್ವಾಗತಿಸಿ ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ ಕುಮಾರ್‌ ವಂದಿಸಿದರು. ಶಿಕ್ಷಕಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಚಿವ ಕೋಟ ಅವರ ವಿನೂತನ ಯೋಚನೆ
ಯಾವ ಮಂತ್ರಿಯೂ ಯೋಚಿಸದ ಕಾರ್ಯವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಡಿದ್ದು, ಸರಕಾರದ ಯೋಜನೆಯನ್ನೇ ಮನೆ ಬಾಗಿಲಿಗೆ ಕೊಂಡು ಹೋಗುವ ಕಾರ್ಯವಾಗಿದೆ ಎಂದು ಸಚಿವ ನಾರಾಯಣ ಸ್ವಾಮಿ ಅವರು ಅಂತ್ಯೋ ದಯ ಸಮಾವೇಶವನ್ನು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next