Advertisement

India ದಲ್ಲಿ ದ್ವೇಷ ಭಾಷಣ ಹೆಚ್ಚಳ: ಅಮೆರಿಕ ಕಳವಳ

12:19 AM Jun 28, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ದ್ವೇಷ ಭಾಷಣ ಹೆಚ್ಚಾಗಿದ್ದು, ಇದು ಅತ್ಯಂತ ಕಳವಳದ ವಿಚಾರ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಹೇಳಿದ್ದಾರೆ.

Advertisement

ವಿದೇಶಾಂಗ ಇಲಾಖೆಯಿಂದ ಜಗತ್ತಿನ 200 ದೇಶಗಳಿಗೆ ಸಂಬಂಧಿಸಿದ 2023ರ ಧಾರ್ಮಿಕ ಸ್ವಾತಂತ್ರ್ಯ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಶ್ವಾದ್ಯಂತ ಬಹುತೇಕರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಸಿಗುತ್ತಿಲ್ಲ. ಭಾರತದಲ್ಲಿ ಮತಾಂತರ ನಿಷೇಧ ಕಾಯ್ದೆ, ದ್ವೇಷ ಭಾಷಣಗಳು, ಅಲ್ಪಸಂಖ್ಯಾಕರ ಪ್ರಾರ್ಥನಾ ಸ್ಥಳ, ಮನೆಗಳನ್ನು ಧ್ವಂಸಗೊಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಪಸಂಖ್ಯಾಕರ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಲು ಅಮೆರಿಕ ಸೇರಿ ಜಗತ್ತಿನ ಇತರ ದೇಶಗಳು ಶ್ರಮಿಸುತ್ತಿವೆ ಎಂದಿದ್ದಾರೆ.

ಭಾರತದ 28 ರಾಜ್ಯಗಳ ಪೈಕಿ 10 ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದು, ಕೆಲವು ರಾಜ್ಯಗಳು ಮತಾಂತರಗೊಂಡವರ ಮೇಲೆ ದಂಡ ವಿಧಿಸುತ್ತಿವೆ. ಅಲ್ಪಸಂಖ್ಯಾಕರ ಹತ್ಯೆ, ದೌರ್ಜನ್ಯ, ಅವರ ಪ್ರಾರ್ಥನಾ ಸ್ಥಳಗಳ ಧ್ವಂಸವಾದ ಕೆಲವು ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಬ್ಲಿಂಕನ್‌ ಹೇಳಿದ್ದಾರೆ.

ಪಕ್ಷಪಾತದ ವರದಿ: ಭಾರತ ಈ ವರದಿಯನ್ನು ಭಾರತದ ವಿದೇಶಾಂಗ ಇಲಾಖೆ ಅಲ್ಲಗಳೆದಿದ್ದು, ಈ ವರದಿ ಸಂಪೂರ್ಣ ಪಕ್ಷಪಾತದಿಂದ ಕೂಡಿದೆ ಎಂದು ಹೇಳಿದೆ. ಅದರಲ್ಲಿ ದೋಷಪೂರಿತ ಮಾಹಿತಿಗಳಿವೆ. ಹಾಗಾಗಿ ಈ ವರದಿ ವಿಶ್ವಾಸಾರ್ಹವಲ್ಲ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next