Advertisement

Antim Panghal ಗೆ 3 ವರ್ಷ ನಿಷೇಧ ಸುಳ್ಳು: ಐಒಎ

11:52 PM Aug 08, 2024 | Team Udayavani |

ಪ್ಯಾರಿಸ್‌: 53 ಕೆ.ಜಿ. ಕುಸ್ತಿಯ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿರುವ ಅಂತಿಮ್‌ ಪಂಘಲ್‌ ಅವರನ್ನು 3 ವರ್ಷ ಸ್ಪರ್ಧೆ ಗಳಿಂದ ನಿಷೇಧಿಸುವ ಯಾವುದೇ ಉದ್ದೇಶ ನಮ್ಮ ಮುಂದಿಲ್ಲ ಎಂದು ಐಒಎ (ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ) ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಅಂತಿಮ್‌ರನ್ನು ಐಒಎ 3 ವರ್ಷ ನಿಷೇಧಿಸುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಂತಿಮ್‌ ಅಕ್ರೆಡಿಟೇಶನ್‌ ಕಾರ್ಡ್‌ ಬಳಸಿ ಒಲಿಂಪಿಕ್ಸ್‌ ಕ್ರೀಡಾಗ್ರಾಮಕ್ಕೆ ಸಹೋದರಿ ನಿಶಾ ಪ್ರವೇಶಿಸಿದ್ದರು.

Advertisement

ಬುಧವಾರವಷ್ಟೇ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ ಅಂತಿಮ್‌ ಪಂಘಲ್‌, ವಿವಾದಗಳ ಮೇಲೆ ವಿವಾದಕ್ಕೆ ತುತ್ತಾಗಿ ದ್ದಾರೆ. ಬುಧವಾರ ಅಂತಿಮ್‌ ಅಕ್ರೆಡಿಟೇಶನ್‌ ಕಾರ್ಡ್‌ ಬಳಸಿ ಅವರ ತಂಗಿ ನಿಶಾ ಕ್ರೀಡಾಗ್ರಾಮಕ್ಕೆ ಪ್ರವೇಶಿಸಿದ್ದಾರೆ, ಹೀಗಾಗಿ ಪ್ಯಾರಿಸ್‌ ಪೊಲೀಸರು ನಿಶಾರನ್ನು ಬಂಧಿಸಿದ್ದಾರೆ ಎನ್ನಲಾಗಿತ್ತು. ಒಲಿಂಪಿಕ್‌ ಸಂಘಟಕರು ಅಂತಿಮ್‌ ಅಕ್ರೆಡಿಟೇಶನ್‌ ಕಾರ್ಡ್‌ ರದ್ದು ಮಾಡಿ, ತಮ್ಮ ಸಹಾಯಕ ಸಿಬಂದಿ ಸಮೇತ ಮರಳಲು ಸೂಚಿಸಿದ್ದಾರೆಂದು ವರದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next