ಮುಂಬೈ: ಮುಂಬೈನ ಥಾಣೆಯಲ್ಲಿ ಉತ್ತಮ ಗುಣಮಟ್ಟದ ನಕಲಿ ನೋಟುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಸ್ಥಳಗಳಲ್ಲಿ ಎನ್ ಐಎ ದಾಳಿ ನಡೆಸಿದೆ. ಮೇಲ್ನೋಟಕ್ಕೆ ಈ ನಕಲಿ ನೋಟು ಜಾಲದಲ್ಲಿ ಡಿ(ದಾವೂದ್) ಕಂಪನಿ ಕೈವಾಡ ಇದ್ದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:‘ಆಪರೇಷನ್ ಕಮಲ’… ಪರಿಸ್ಥಿತಿ ಉದ್ಭವಿಸುವುದಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
2021ರ ನವೆಂಬರ್ ನಲ್ಲಿ 2.98 ಲಕ್ಷ ಮುಖಬೆಲೆಯ ನಕಲಿ ನೋಟುಗಳನ್ನು ಥಾಣೆ ಕ್ರೈಮ್ ಬ್ರ್ಯಾಂಚ್ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯಲ್ಲಿ ಭಾರತದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುವ ಉದ್ದೇಶ ಡಿ (ದಾವೂದ್ ಇಬ್ರಾಹಿಂ) ಕಂಪನಿಯಾಗಿದೆ ಎಂಬ ವಿವರ ಬಹಿರಂಗಗೊಂಡಿತ್ತು.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ನೇತೃತ್ವದಲ್ಲಿ ಡಿ ಕಂಪನಿ ಚಿನ್ನ ಕಳ್ಳಸಾಗಣೆ, ಮಾದಕ ದ್ರವ್ಯ, ನಕಲಿ ನೋಟುಗಳ ರಾಕೆಟ್ ನಲ್ಲಿ ತೊಡಗಿಕೊಂಡಿದೆ.
ಪ್ರಕರಣದಲ್ಲಿನ ಆರೋಪಿಗಳು ಮತ್ತು ಶಂಕಿತರ ಮನೆಗಳು ಹಾಗೂ ಕಚೇರಿಗಳ ಮೇಲೆ ಎನ್ ಐಎ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಹರಿತವಾದ ಆಯುಧಗಳು, ಡಿಜಿಟಲ್ ಉಪಕರಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.