ಹುಬ್ಬಳ್ಳಿ: ಎಂಇಎಸ್ ಹಾಗೂ ಮರಾಠಿ ಹೆಸರಲ್ಲಿ ಕೆಲವೇ ಕೆಲವರು ಸಮಾಜ ವಿರೋಧಿ ಕೃತ್ಯಗಳಿಗೆ ಮುಂದಾಗಿದ್ದು, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜವಿದ್ರೋಹಿ ಕೃತ್ಯಗಳಲ್ಲಿ ತೊಡಗುವವರು ನೆನಪಿಸಿಕೊಳ್ಳುವಂತಹ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರದಲ್ಲಿ ಕನ್ನಡಿಗರು, ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಆದರೆ ಕೆಲವರು ರಾಜಕೀಯ ಸ್ವಾರ್ಥ ಸಾಧನೆಗೆ ಇಂತಹ ಕೃತ್ಯಗಳಿಗೆ ಯತ್ನಿಸುತ್ತಿದ್ದಾರೆ. ಎರಡೂ ಕಡೆಯ ಮುಖಂಡರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ:ವಿಪಕ್ಷ ನಾಯಕರ ವರ್ತನೆಯಿಂದ ಬೇಸರ : ಬಸವರಾಜ್ ಹೊರಟ್ಟಿ
ಮಹಾರಾಷ್ಟ್ರ ಸರಕಾರವೂ ದಾರಿ ತಪ್ಪಿಸುವ ಹೇಳಿವೆ ನೀಡಬಾರದು. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಹಿರಿಯರಾದ ಶರದ್ ಪವಾರ್ ಯೋಚಿಸಬೇಕು. ಶಿವಸೇನೆ ಈ ಹಿಂದೆ ಹಿಂದುತ್ವಕ್ಕಾಗಿ ಶ್ರಮಿಸಿದ್ದು, ಇದೀಗ ಸಮಾಜ ಇಭ್ಬಾಗಿಸುವ ಕೆಲಸಕ್ಕೆ ಮುಂದಾಗಬಾರದು ಎಂದರು.
ದುಷ್ಕೃತ್ಯ ಯಾವ ಕಡೆಯವರು ಮಾಡಿದರು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂಇಎಸ್ ರಾಜಕೀಯ ಪಕ್ಷವಾಗಿದೆ ಅದರ ನಿಷೇಧಕ್ಕೆ ಸಾಧಕ ಬಾಧಕಗಳ ಚಿಂತನೆ, ಕಾನೂನಾತ್ಮಕಗಳ ಕುರಿತಾಗಿಯೂ ಚಿಂತಿಸಬೇಕಾಗಿದೆ. ನಿಸ್ತೇಜ ಸ್ಥಿತಿಯಲ್ಲಿರುವ ಎಂಇಎಸ್ ಇಂತಹ ಕೃತ್ಯಗಳ ಮೂಲಕ ಶಕ್ತಿ ಹೆಚ್ಚಿಸಿಕೊಳ್ಳುಲು ಮುಂದಾಗಿದೆ. ಎಂಇಎಸ್ ನಿಷೇಧಕ್ಕೆ ಸಾಧ್ಯವಾಗದಿದ್ದರೂ ಅದರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿಎಂ ಜತೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.