Advertisement
ಬೆಳಗ್ಗೆ ಎದ್ದು ಜನ ಮನೆ ಬಾಗಿಲು ತೆರೆದರೆ ಸಾಕು, ದುರ್ವಾಸನೆ. ಇನ್ನು ಸಾರ್ವಜನಿಕ ರಸ್ತೆಗಳಲ್ಲೂ ಇದೇ ಸ್ಥಿತಿ. ಇದಕ್ಕೆ ವೆಸ್ಟ್ಮಿನ್ಸರ್ ಆಡಳಿತ ಒಂದು ದಾರಿ ಕಂಡುಹಿಡಿದಿದೆ. ಗೋಡೆಗಳ ಮೇಲೆ ಒಂದು ರೀತಿಯ ಪೈಂಟ್ ಬಳಿದಿದೆ. ಪಾರದರ್ಶಕವೆಂಬಂತೆ ಕಾಣುವ ಅದರ ಮೇಲೆ ಮೂತ್ರ ವಿಸರ್ಜಿಸಿದರೆ, ಹನಿಗಳು ಹಿಂದಕ್ಕೆ ಸಿಡಿಯುತ್ತವೆ! ಇಂತಹದ್ದೊಂದು ಉಪಾಯವನ್ನು ಜರ್ಮನಿಯಲ್ಲೂ ಮಾಡಲಾಗಿದೆ. ಜೊತೆಗೆ ಒಂದು ಫಲಕವನ್ನು ತೂಗು ಹಾಕಲಾಗಿದೆ, ಅದರಲ್ಲಿ “ದಿಸ್ ವಾಲ್ ಈಸ್ ನಾಟ್ ಎ ಯೂರಿನಲ್. ದೇರ್ ಈಸ್ ಆ್ಯಂಟಿ ಪೀ ಪೈಂಟ್ ಇನ್ ದಿಸ್ ಏರಿಯಾ’ ಎಂದು ಬರೆಯಲಾಗಿದೆ. ಹೀಗಾದರೂ ಜನ ತಣ್ಣಗಾಗುತ್ತಾರಾ ಎಂಬ ನಿರೀಕ್ಷೆ ಸ್ಥಳೀಯ ಪಾಲಿಕೆಯದ್ದು! Advertisement
ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಲಂಡನ್ನಲ್ಲಿ ಪೈಂಟ್ ಅಸ್ತ್ರ!
09:17 PM Jan 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.