Advertisement

ಡಿಜಿಟಲ್‌ ಕ್ಷೇತ್ರ: ಟೆಕ್‌ ದಿಗ್ಗಜರಿಗೆ ನಾಳೆ ಸಮಿತಿ ಪರೀಕ್ಷೆ

11:20 PM Aug 21, 2022 | Team Udayavani |

ನವದೆಹಲಿ: ಆ್ಯಪಲ್‌, ಗೂಗಲ್‌, ನೆಟ್‌ಫ್ಲಿಕ್ಸ್‌, ಅಮೆಜಾನ್‌ ಇಂಡಿಯಾ, ಮೈಕ್ರೋಸಾಫ್ಟ್ ಕಂಪನಿಗಳ ಭಾರತದ ಮುಖ್ಯಸ್ಥರು ಮಂಗಳವಾರ ವಿತ್ತೀಯ ವಿಚಾರಗಳಿಗಾಗಿನ ಸಂಸತ್‌ನ ಸ್ಥಾಯಿ ಸಮಿತಿ ಮುಂದೆ ಹಾಜರಾಗಲಿದ್ದಾರೆ.

Advertisement

ಡಿಜಿಟಲ್‌ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಅವಕಾಶದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಂಸ್ಥೆಗಳ ಮುಖ್ಯಸ್ಥರು ಸಂಸದ ಜಯಂತ ಸಿನ್ಹಾ ನೇತೃತ್ವದ ಸಮಿತಿಯ ಮುಂದೆ ವಿವರಣೆ ನೀಡಲಿದ್ದಾರೆ.

ಸ್ವಿಗ್ಗಿ, ಜೊಮ್ಯಾಟೋ, ಫ್ಲಿಪ್‌ಕಾರ್ಟ್‌, ಕ್ಯಾಬ್‌ ಸೇವೆ ನೀಡುವ ಓಲಾ, ಹೋಟೆಲ್‌ ಸೇವೆ ನೀಡುವ ಓಯೋ, ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌ನ ಮುಖ್ಯಸ್ಥರೂ ಸಮಿತಿಯ ಮುಂದೆ ಹಾಜರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next