Advertisement

ವಿಶ್ವಸುಂದರಿಯರು ಕೊಟ್ಟ ಉತ್ತರಗಳು

01:28 PM Dec 13, 2017 | |

ಸೌಂದರ್ಯ ಮತ್ತು ಬುದ್ಧಿಶಕ್ತಿಯನ್ನು ಒಂದೇ ವೇದಿಕೆಯಲ್ಲಿ ಅಳೆದು, ತೂಗುವ ಸ್ಪರ್ಧೆಯೇ “ವಿಶ್ವ ಸುಂದರಿ’ ಸ್ಪರ್ಧೆ. 118 ಸುಂದರಿಯರು ಪಾಲ್ಗೊಂಡಿದ್ದ ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ, ಅಂತಿಮ ಸುತ್ತಿಗೆ ಆಯ್ಕೆಯಾದವರು ಕೇವಲ ಐವರು ಮಾತ್ರ. ಆ ಪಂಚಕನ್ಯೆಯರ ಬುದ್ಧಿಶಕ್ತಿ ಹೇಗಿತ್ತು? ಅವರ ಉತ್ತರದಿಂದ ನಾವು ಕಂಡುಕೊಳ್ಳುವುದು ಏನನ್ನು? 

Advertisement

1. ಸ್ಟೆಫ‌ನಿ ಹಿಲ್‌, ಮಿಸ್‌ ಇಂಗ್ಲೆಂಡ್‌
* ವಿಶ್ವದ ಎಲ್ಲ ನಾಯಕರ ಎದುರು ಮಾತನಾಡುವ ಅವಕಾಶ ಸಿಕ್ಕಿದರೆ, ಯಾವ ವಿಷಯದ ಬಗ್ಗೆ ಮಾತಾಡುತ್ತೀರಿ?
– ನಾನು ಜಾಗತಿಕ ಆರೋಗ್ಯಕ್ಷೇತ್ರದ ಅಸ್ಥಿರತೆಯ ಕುರಿತು ಮಾತಾಡಲು ಇಚ್ಛಿಸುತ್ತೇನೆ. ಜಗತ್ತಿನಲ್ಲಿ ವ್ಯಾಕ್ಸಿನ್ಸ್‌ಗಳು, ಔಷಧಗಳು ಲಭ್ಯವಿವೆ. ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ. 

2. ಅರೋರೆ ಕಿಚೆನಿನ್‌, ಮಿಸ್‌ ಫ್ರಾನ್ಸ್‌ 
* ಇಲ್ಲಿಯವರೆಗೆ ಜಗತ್ತಿನ ಅತ್ಯಂತ ಮಹತ್ವದ ಅನ್ವೇಷಣೆ ಯಾವುದು ಮತ್ತು ಯಾಕೆ?
– ಅತ್ಯಂತ ಮಹತ್ವದ ಅನ್ವೇಷಣೆ ಅಂದರೆ, ಅದು ಸಾರಿಗೆ. ಎಲ್ಲ ದೇಶಗಳ ಪರಸ್ಪರ ಸಂಪರ್ಕ ಸಾರಿಗೆಯಿಂದ ಸಾಧ್ಯವಾಗಿದೆ. 

3. ಮಾನುಷಿ ಛಿಲ್ಲರ್‌, ಮಿಸ್‌ ಇಂಡಿಯಾ
*ಯಾವ ವೃತ್ತಿಗೆ ಅತಿ ಹೆಚ್ಚು ವೇತನ ಸಿಗಬೇಕು ಮತ್ತು ಏಕೆ?
– ನಾನು ನಮ್ಮ ಅಮ್ಮನಿಗೆ ತುಂಬಾ ಕ್ಲೋಸ್‌ ಇರುವುದರಿಂದ, ನನ್ನ ಪ್ರಕಾರ ತಾಯಿಗೇ ಅತಿ ಹೆಚ್ಚಿನ ಗೌರವ ಸಿಗಬೇಕು. ವೇತನ ಅಂದರೆ, ಅದು ಕೇವಲ ಹಣ ಮಾತ್ರ ಅಲ್ಲ. ಬೇರೆಯವರಿಗೆ ತೋರಿಸುವ ಪ್ರೀತಿ- ಗೌರವವೂ ಕೂಡ ಆ ಲೆಕ್ಕಕ್ಕೇ ಬರುತ್ತದೆ. ಅಮ್ಮನೇ ನನ್ನ ಜೀವನದ ದೊಡ್ಡ ಸ್ಫೂರ್ತಿ. ಎಲ್ಲ ತಾಯಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ. ಅತಿ ಹೆಚ್ಚು ವೇತನ, ಗೌರವ ಮತ್ತು ಪ್ರೀತಿ ಸಿಗಬೇಕಾಗಿದ್ದು ತಾಯಂದಿರಿಗೆ. 

4. ಮ್ಯಾಗ್‌ಲೈನ್‌ ಜೆರುಟೊ, ಮಿಸ್‌ ಕೀನ್ಯಾ
* ಸೈಬರ್‌ ಬುಲ್ಲಿಯಿಂಗ್‌ (ಬೆದರಿಕೆ) ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಅದನ್ನು ನೀವು ಹೇಗೆ ಪರಿಹರಿಸುತ್ತೀರಿ?
-ಸೈಬರ್‌ ಬುಲ್ಲಿಯಿಂಗ್‌ ಅನ್ನೋದು ಇತ್ತೀಚಿಗೆ ಬಹುದೊಡ್ಡ ಸಮಸ್ಯೆಯಾಗಿದೆ ಮತ್ತು ಅದು ಕೊನೆಯಾಗಬೇಕು. 

Advertisement

5. ಆಂಡ್ರಿಯಾ ಮೆಝಾ, ಮಿಸ್‌ ಮೆಕ್ಸಿಕೊ
*ವಿಶ್ವ ಸುಂದರಿಗೆ ಇರಬೇಕಾದ ಮುಖ್ಯವಾದ ಗುಣ ಯಾವುದು?
ಪ್ರೀತಿ… ಅವಳಿಗೆ ಅವಳ ಮೇಲೆ ಹಾಗೂ ಜಗತ್ತಿನ ಮೇಲೆ ಪ್ರೀತಿ ಇರಬೇಕು. ಅದುವೇ ಬಹಳ ಮುಖ್ಯವಾದ ಗುಣ. ವಿಶ್ವ ಸುಂದರಿಯಾದವಳು ಪ್ರೀತಿ ಮತ್ತು ಸಂತೋಷವನ್ನು ಹಂಚಬಲ್ಲವಳಾಗಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next