Advertisement
ಮಂಗಳವಾರ ಚುನಾವಣಾ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ರಾಯ ಚೂರು, ಕೊಪ್ಪಳ, ಬಳ್ಳಾರಿ, ಬೀದರ್ ಮತ್ತು ಕಲಬುರಗಿಯಲ್ಲಿ ನಾವು ಗೆಲ್ಲುವ ವಾತಾ ವರಣ ಇತ್ತು. ಚುನಾವಣೆ ನಡೆಯುವ ವೇಳೆಗೆ ಕೆಲ ಸಮಸ್ಯೆ ಆಯಿತು. ಹಲವೆಡೆ ಕಾಂಗ್ರೆಸ್‌ನ ಹಣದ ಹೊಳೆ, ಅತಿಯಾದ ಆತ್ಮವಿಶ್ವಾಸದಿಂದ ಮೈತ್ರಿ ಅಭ್ಯರ್ಥಿಗಳು ಮೈಮರೆತದ್ದು ಹಾಗೂ ಪ್ರಧಾನಿ ಮೋದಿ ಅವರ ಶ್ರಮವನ್ನು ಗೆಲುವಿನತ್ತ ಒಯ್ಯುವಲ್ಲಿ ನಮ್ಮಿಂದಲೂ ಕೆಲವೆಡೆ ತಪ್ಪುಗಳಾಗಿವೆ. ಇದನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ಯಾರ ಮೇಲೂ ದೋಷಾರೋಪಣೆ ಮಾಡುವುದಿಲ್ಲ ಎಂದರು.
ದುರಹಂಕಾರಕ್ಕೆ ಉತ್ತರ: ಕೆಪಿಸಿಸಿ ಅಧ್ಯಕ್ಷನಾದ ನನಗೆ ಜನತೆ 136 ಸ್ಥಾನ ಕೊಟ್ಟರು. ಕುಮಾರಸ್ವಾಮಿಯನ್ನು 19 ಸ್ಥಾನಕ್ಕೆ ಇಳಿಸಿದರು. ನಾನೇ ಒಕ್ಕಲಿಗ ನಾಯಕ ಎಂಬಂತೆ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆಗ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಇರಲಿಲ್ಲ. ಸಿ.ಎಂ. ಇಬ್ರಾಹಿಂ ಇದ್ದರು. ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಸೂರ್ಯ-ಚಂದ್ರರು ಹುಟ್ಟುವಷ್ಟೇ ಸತ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಸೂರ್ಯ ಹುಟ್ಟಿದ್ದಾನೋ ಇಲ್ಲವೋ ಎಂದು ಅವರೇ ಹೇಳಬೇಕು. ಇಂತಹ ಉದ್ಧಟತನದ ಹೇಳಿಕೆ, ದುರಹಂಕಾರದ ಮಾತುಗಳಿಗೆ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
Related Articles
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿದಾಗ, ಪಕ್ಷ ಮುಳು ಗುತ್ತದೆ ಎಂದು ಅಳಿಯನನ್ನೇ ಬಿಜೆಪಿಗೆ ಕಳುಹಿಸಿದ್ದಾರೆ ಎಂದು ಹಂಗಿಸಿದ್ದರು. ಇಲ್ಲಿ ನಮ್ಮ ತಂತ್ರ ಯಶಸ್ಸು ಕೊಟ್ಟಿದೆ. 2009ರಲ್ಲಿ ಕ್ಷೇತ್ರ ವಿಂಗಡಣೆ ಬಳಿಕ ಗ್ರಾಮಾಂತರದಲ್ಲಿ ಎರಡು ಬಾರಿ ಕಾಂಗ್ರೆಸ್ ಗೆಲ್ಲಲು ಬೇರೆ ಕಾರಣಗಳಿದ್ದವು. ಸೋಲಿನ ವಾತಾವರಣ ಗೊತ್ತಾಗುತ್ತಿದ್ದಂತೆ ಧೃತಿಗೆಟ್ಟು ಡಿಸಿಎಂ ಶಿವ ಕುಮಾರ್ ಬಾಯಿಗೆ ಬಂದಂತೆ ಮಾತನಾಡಿ ದರು. ಕುರಿ, ಕೋಳಿ, ಕೋಣ ಕಡಿದು ಶತ್ರು ಭೈರವಿ ಯಾಗ ಮಾಡಿಲ್ಲ ನಾವು ಗೆದ್ದಿಲ್ಲ ಎಂದು ತಿರುಗೇಟು ಕೊಟ್ಟರು.
Advertisement