Advertisement
ಮಂಜೇಶ್ವರ : 144 ಸೆಕ್ಷನ್ಶುಕ್ರವಾರ ಮಂಜೇಶ್ವರ ತಾಲೂಕಿ ನಾದ್ಯಂತ 144 ಸೆಕ್ಷನ್ ನಡಿ ಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.ಎಸ್‌ಪಿ ಡಾ| ಎ. ಶ್ರೀನಿವಾಸ್ ಹಾಗೂ ಎಎಸ್‌ಪಿ ಶಿಲ್ಪಾ ನೇತೃತ್ವ ದಲ್ಲಿ ಬಿಗು ಬಂದೋಬಸ್ತ್ ಮಾಡ ಲಾಗಿದೆ. ಸೂಕ್ಷ್ಮ ಸಂವೇದಿ ಪ್ರದೇಶ ದಲ್ಲಿ ವಿಶೇಷ ಭದ್ರತೆ ಮತ್ತು ಗಸ್ತು ನಡೆಸಲಾಯಿತು. ಭಕ್ತರ ವಾಹನಗಳಿಗೆ ಭದ್ರತೆ ಒದಗಿಸಲಾಗಿದೆ. ಕಿಡಿಗೇಡಿಗಳ ಹಲ್ಲೆಯಿಂದ ಅಯ್ಯಪ್ಪ ವ್ರತಧಾರಿಗಳ ಸಹಿತ 15ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಶಶಿಕಲಾ ತಾನು ದೇಗುಲ ಪ್ರವೇಶಿಸಿಲ್ಲ ಎಂದಿರುವ ಹಿನ್ನೆಲೆಯಲ್ಲಿ ಪೊಲೀಸರು ದೇಗುಲದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದಾರೆ. ಶಶಿಕಲಾ ಅವರು ಸನ್ನಿಧಾನಂ ಕಡೆಗೆ ಹೆಜ್ಜೆಯಿಡುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀಕೋವಿಲ್‌ನಲ್ಲಿ ಅಳವಡಿಸಿದ್ದ ಕಣ್ಗಾವಲು ಕೆಮರಾದಲ್ಲಿ ಶಶಿಕಲಾ ಮತ್ತು ಅವರೊಂದಿಗಿದ್ದ ಪುರುಷ ರೊಬ್ಬರು ದರ್ಶನ ಪಡೆದು ವಾಪಸಾಗುತ್ತಿರುವುದು ಕೂಡ ದಾಖಲಾಗಿದೆ. ಶಶಿಕಲಾ ಅವರ ತಲೆಯಲ್ಲಿ ಇರುಮುಡಿ ಕಟ್ಟು ಕೂಡ ಇದೆ. ಈ ಕುರಿತು ಮಾತನಾಡಿರುವ ಶಶಿಕಲಾ, ನಾನು ಅಯ್ಯಪ್ಪ ಭಕ್ತೆ. 41 ದಿನಗಳ ವ್ರತವನ್ನೂ ಮಾಡಿದ್ದೇನೆ. ನಾನು ದೇಗುಲಕ್ಕೆ ಹೋದಾಗ ಭಕ್ತರು ವಿರೋಧಿಸದಿದ್ದರೂ ಪೊಲೀಸರೇ ವಾಪಸ್ ಕಳುಹಿಸಿದರು. ನಿಮಗೆಲ್ಲರಿಗೂ ಅಯ್ಯಪ್ಪನೇ ಉತ್ತರ ಕೊಡುತ್ತಾನೆ ಎಂದರು. ಪಂಪಾದಲ್ಲಿ ವರದಿಗಾರರ ಜತೆ ಮಾತನಾಡಿದ ಶಶಿಕಲಾ ಅವರ ಪತಿ ಶರವಣನ್, ನಾನು, ಪತ್ನಿ ಹಾಗೂ ಪುತ್ರ ದರ್ಶನಕ್ಕಾಗಿ ತೆರಳಿದ್ದು ನಿಜ. ಆದರೆ ನನ್ನ ಪತ್ನಿಗೆ 18 ಮೆಟ್ಟಿಲು ಹತ್ತಲು ಪೊಲೀಸರು ಬಿಡಲಿಲ್ಲ. ಹೀಗಾಗಿ ನಾನು ಮತ್ತು ಮಗ ಮಾತ್ರ ಅಯ್ಯಪ್ಪನ ದರ್ಶನ ಪಡೆದೆವು ಎಂದಿದ್ದಾರೆ. ಆದರೆ ಭದ್ರತೆಯ ಭಯದಿಂದ ಶಶಿಕಲಾ ಕುಟುಂಬ ಈ ರೀತಿ ಹೇಳುತ್ತಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಶಬರಿಮಲೆ ಯಾತ್ರೆ ಸುಗಮ
ತಲಪಾಡಿ/ವಿಟ್ಲ/ಜಾಲೂಸೂರು: ಕೇರಳ ದಲ್ಲಿ ಆತಂಕವಿದ್ದರೂ ದಕ್ಷಿಣ ಕನ್ನಡ ಜಿಲ್ಲೆ ಮೂಲಕ ಶಬರಿಮಲೆಗೆ ತೆರಳುವ ಭಕ್ತರಿಗೆ ಶುಕ್ರವಾರ ಸಮಸ್ಯೆ ಎದುರಾಗಿಲ್ಲ. ಗಡಿ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಇದ್ದು, ಅನ್ಯರಾಜ್ಯಗಳು ಮತ್ತು ರಾಜ್ಯದ ವಿವಿಧೆಡೆಯಿಂದ ಖಾಸಗಿ ವಾಹನಗಳಲ್ಲಿ ಬಂದ ಯಾತ್ರಿಕರು ತಲಪಾಡಿ, ವಿಟ್ಲ, ಜಾಲೂಸೂರುರು ಮೂಲಕ ಕೇರಳಕ್ಕೆ ತೆರಳಿದರು. ಮಂಗಳೂರಿನಿಂದ ಪ್ರಯಾಣಿಸುವವರು ರೈಲುಗಳನ್ನು ಆಶ್ರಯಿಸಿದರು.
Related Articles
ಕಾಸರಗೋಡು: ಶಬರಿಮಲೆಗೆ ಯುವತಿಯರ ಪ್ರವೇಶ ಖಂಡಿಸಿ ಗುರುವಾರ ನಡೆದ ಹರತಾಳ ಮತ್ತು ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಜಿಲ್ಲೆ ಯಲ್ಲಿ 677 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, 33 ಮಂದಿ ಬಂಧಿಸಿದ್ದಾರೆ. ಇತರರಿಗಾಗಿ ತೀವ್ರ ಶೋಧ ನಡೆಯುತ್ತಿದೆ.
Advertisement
ಬಾಯಾರು ಮುಳಿಗದ್ದೆಯ ಮದ್ರಸಾ ಅಧ್ಯಾಪಕ ಅಬ್ದುಲ್ ಕರೀಂ ಮೇಲೆ ಹಲ್ಲೆಗೆ ಸಂಬಂಧಿಸಿ 12 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಂದ್ಯೋಡಿನ ಹಲ್ಲೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಕುಂಬಳೆ ಪೊಲೀಸರು 100 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಕಾಸರಗೋಡು ನಗರ ಮತ್ತು ಪರಿಸರದಲ್ಲಿ ಅಹಿತಕರ ಘಟನೆಗೆ ಸಂಬಂಧಿಸಿ 16 ಮಂದಿಯನ್ನು ಬಂಧಿಸಿ ದ್ದು, ಕರಂದಕ್ಕಾಡ್‌ನಲ್ಲಿ ವಾಹನಗಳನ್ನು ತಡೆದು ಮೆರವಣಿಗೆ ನಡೆಸಿದ ಘಟನೆಗೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ಶ್ರೀಕಾಂತ್, ಪಿ. ರಮೇಶ್, ಸುಜಿತ್, ಉಮಾ, ರೋಹಿತ್ ಸಹಿತ 280 ಮಂದಿ ವಿರುದ್ಧ ಕೇಸು ದಾಖಲಾಗಿದೆ.
ಮನೆಗೆ ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿ 10 ಮಂದಿ ವಿರುದ್ಧ ಕೇಸು ದಾಖಲಿಸಿದ್ದು, ಆಟೋ ರಿಕ್ಷಾ ಹಾನಿಗೊಳಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಪೊಯಿನಾಚಿಯಲ್ಲಿ ರಸ್ತೆ ತಡೆ ನಡೆಸಿದ ಆರೋಪದಲ್ಲಿ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಶಂಕಿತ ಯುವಕನೋರ್ವನನ್ನು ಬಂಧಿಸಲಾಗಿದೆ. ಮಧೂರಿನಲ್ಲಿ ಅನುಮತಿ ರಹಿತ ಮೆರವಣಿಗೆ ಸಂಬಂಧ ಐವರನ್ನು ಬಂಧಿಸಲಾಗಿದೆ.