ಹೊಸಪೇಟೆ:ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಸಾಹಿತಿ ಕುಂ.ವೀರಭದ್ರಪ್ಪ ನವರು ಹಾಗೂ ನಟ ಪ್ರಕಾಶ್ ರೈ ಸೇರಿದಂತೆ ಒಟ್ಟು 61 ಜನರಿಗೆ ಬೆದರಿಕೆ ಪತ್ರ ಬಂದಿದೆ.
ಮೊದಲನೇ ಪತ್ರ ಭದ್ರಾವತಿಯಿಂದ ಬಂದಿತ್ತು. ಇದೀಗ ಚಿತ್ರದುರ್ಗದಿಂದ ಮತ್ತೊಂದು ಪತ್ರ ಬಂದಿದ್ದು, ಇದೀಗ ಕೊಟ್ಟೂರಿನ ಕುಂ.ವೀ ನಿವಾಸಕ್ಕೆ ಪತ್ರ ಬಂದಿದೆ.
ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ಕುಮಾರ್ ಸ್ವಾಮಿ ಸೇರಿ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು. ಈಗ ಕುವೀ ಸೇರಿದಂತೆ ಮಾಜಿ ಸಿಎಂಗಳಾದ ಎಚ್.ಡಿ.ಕುಮಾರ್ ಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ್, ನಿಜಗುಣಾನಂದ ಸ್ವಾಮಿಜಿ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್ ಹಾಗೂ ಪ್ರಕಾಶ್ ರೈ ಸೇರಿದಂತೆ 61 ಜನರಿಗೆ ಬೆದರಿಕೆ ಪತ್ರ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕುಂ.ವೀ ಮತ್ತೊಂದು ಬೆದರಿಕೆ ಪತ್ರ ಬಂದಿದೆ, ಚಿತ್ರದರ್ಗದಿಂದ ಪೋಸ್ಟ್ ಆಗಿದೆ. ಸಾರ್ವಜನಿಕ ಜೀವನದಲ್ಲಿ ಇರವವರಿಗೆ ಇಂತಹ ಬೆದರಿಕೆ ಪತ್ರಗಳು ಬರುವುದು ಸಾಮಾನ್ಯ. ನಾನೀಗ 70 ರ ಅಸುಪಾಸಿನಲ್ಲಿದ್ದೇನೆ. ಭಾವೈಕ್ಯತೆ, ಸೌಹಾರ್ದತೆಗಾಗಿ ಹುತಾತ್ಮರಾದವರ ಸಾಲಿನಲ್ಲಿ ನನ್ನದು ಒಂದೂ ಹೆಸರು ಇತಿಹಾಸದ ಪುಟದಲ್ಲಿ ಉಳಿಯಲಿದೆ. ನಮ್ಮ ದೇಶದವರ್ಯಾರು ಈ ಪತ್ರ ಕಳುಹಿಸಿಲ್ಲ. ಈ ಪತ್ರ ಕಳಹಿಸಿದವರು ಬೇರೆ ದೇಶದವರು ಇರಬೇಕು ಎಂದು ಲೇವಡಿ ಮಾಡಿದರು.
Related Articles
ನೀವು ಪೇಪರ್ ಹೀರೋ ಆಗಲು ಹೊರಟಿದ್ದೀರಿ ಎಂದು ಹೇಳಿ ಬರೆಯಲಾಗಿದೆ. ಮೊದಲ ಪತ್ರ ಬಂದಾಗ ವಿಜಯನಗರ ಎಸ್‌ಪಿ ಡಾ.ಅರುಣ್ ಅವರನ್ನು ಕುಂ.ವೀರಭದ್ರಪ್ಪ ಭೇಟಿಯಾಗಿ ತಮಗೆ ರಕ್ಷಣೆ ನೀಡುವಂತೆ ಕೋರಿದ್ದನ್ನು ಸ್ಮರಿಸಬಹುದಾಗಿದೆ.