Advertisement

ಪಾಕ್‌ಗೆ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ ಭೀತಿ

06:00 AM Dec 28, 2018 | |

ಹೊಸದಿಲ್ಲಿ: 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದ ಮೇಲೆ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಸಾಧ್ಯತೆಗಳಿವೆ ಎಂದು ಪಾಕಿಸ್ಥಾನದ ರೈಲ್ವೇ ಸಚಿವ ಶೇಖ್‌ ರಶೀದ್‌ ಅವರು ಭೀತಿ ವ್ಯಕ್ತಪಡಿಸಿದ್ದಾರೆ. 

Advertisement

ಲಾಹೋರ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, “”2019 ಪಾಕಿಸ್ಥಾನ ತುಂಬಾ ಎಚ್ಚರಿಕೆಯಿಂದ ಇರ ಬೇಕಾದ ವರ್ಷ. ಇತ್ತೀಚೆಗೆ, ಭಾರತದಲ್ಲಿ ನಡೆದ ಪಂಚ ರಾಜ್ಯ ಗಳ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಹಾಗಾಗಿ, 2019ರಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ದಿಂದ ಪಾಕಿಸ್ಥಾನದಲ್ಲಿ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಮೋದಿ ಆದೇಶ ನೀಡಬಹುದು” ಎಂದಿದ್ದಾರೆ.

ಬಿಜೆಪಿ ಟೀಕೆ: ದಿಲ್ಲಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ, ಪಾಕಿಸ್ಥಾನ ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ಕಲ್ಪಿಸಿ ಅವರು ಸಕ್ರಿಯವಾಗಿರುವಂತೆ ನೋಡಿಕೊಳ್ಳುತ್ತಿದೆ. ರಶೀದ್‌ ಅವರ ಹೇಳಿಕೆ ಪಾಕಿಸ್ಥಾನದ ದುಷ್ಟ ಆಡಳಿತದ ಪಾಪ ಪ್ರಜ್ಞೆಗೆ ತಕ್ಕಂತೆ ಹೊರಬಿದ್ದಿದೆ ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next