ರಾಮನಗರ: ಶಾಸಕ ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆಸಿ ನಾಪತ್ತೆ ಯಾಗಿರುವ ಕಂಪ್ಲಿ ಶಾಸಕ ಜಿ.ಎನ್.ಗಣೇಶ್ ಪತ್ತೆ ಹಚ್ಚಲು ಜಿಲ್ಲಾ ಪೊಲೀಸರು ಮತ್ತೂಂದು ತಂಡವನ್ನು ರಚಿಸಿದ್ದಾರೆ. ಗಣೇಶ್ ಶೋಧಕ್ಕೆ ಇದೀಗ ಒಟ್ಟು ನಾಲ್ಕು ತಂಡಗಳು ಕಾರ್ಯ ನಿರತವಾಗಿವೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ರಮೇಶ್ ತಿಳಿಸಿದರು.
ನಗರದ ಪೊಲೀಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂಡಗಳು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲ್ಲ. ಕ್ರೈಂ ವಿಭಾಗದ ಸಿಬ್ಬಂದಿ ಮತ್ತು ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಗಳು ತಂಡಗಳಲ್ಲಿ ಇದ್ದಾರೆ. ಈಗಲ್ಟನ್ ರೆಸಾರ್ಟ್‌ನ ಪ್ರಕರಣದ ತನಿಖೆಗೆ ಪೊಲೀಸರ ಮೇಲೆ ಯಾವ ಒತ್ತಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ತನಿಖೆ ಗಂಭೀರ: ಮೊದಲ ದಿನ ಲಿಖೀತ ದೂರುಗಳು ಬರಲಿಲ್ಲ. ಆದರೂ ಗಾಯಾಳು ಬಳಿ ಹೇಳಿಕೆ ಪಡೆಯಲು ಸಂಬಂಧಿಸಿದ ಠಾಣೆಯ ಅಧಿಕಾರಿಗಳು ಆಸ್ಪತ್ರೆಗೆ ಹೋಗಿದ್ದರು. ಆದರೆ, ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ವೈದ್ಯರು ಬರೆದುಕೊಟ್ಟರು. ಹೀಗಾಗಿ ಸೋಮ ವಾರ ಬಿಡದಿ ಠಾಣಾಧಿ ಕಾರಿಗಳು ಮತ್ತೆ ಆಸ್ಪತ್ರೆಗೆ ಹೋಗಿ ಗಾಯಾಳು ಶಾಸಕರ ಹೇಳಿಕೆ ಪಡೆದುಕೊಂಡು ಬಂದಾಕ್ಷಣ ಎಫ್ಐಆರ್ ದಾಖಲಿಸಿದ್ದಾರೆ. ಆಗಲೂ ಪೊಲೀಸರ ಮೇಲೆ ಯಾರು ಒತ್ತಡ ಹೇರಿಲ್ಲ. ಪ್ರಕರಣದ ತನಿಖೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ದ್ದೇವೆ. ಮುಕ್ತ ಮತ್ತು ನ್ಯಾಯಯು ತವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಹೇಳಿಕೆಗಳು ಪೊಲೀಸರಿಗೆ ಮುಖ್ಯ: ದೂರಿನಲ್ಲಿ ಕೆಲವು ಹೆಸರುಗಳಿವೆ. ಅವರ ಬಳಿ ಹೇಳಿಕೆಗಳನ್ನು ಪಡೆಯು ತ್ತೇವೆ. ಅಲ್ಲದೆ, ಘಟನೆಯ ವೇಳೆ ಹಾಜರಿದ್ದವರು, ಪ್ರತ್ಯಕ್ಷದರ್ಶಿಗಳ ಬಳಿಯೂ ಹೇಳಿಕೆಗಳನ್ನು ಪಡೆಯ ಲಾಗುವುದು. ಹೀಗೆ ಹೇಳಿಕೆ ನೀಡುವರು ತಾವು ಕಂಡಿದ್ದು ಏನು ಎಂಬುದರ ಬಗ್ಗೆ ಮಾಹಿತಿ ಕೊಡುತ್ತಾರೆ. ಮಾಧ್ಯಮಗಳಲ್ಲಿ ಯಾರು ಏನೇ ಹೇಳಿಕೆ ನೀಡಿದ್ದರೂ ತನಿಖೆಯ ಭಾಗವಾಗಿ ಪೊಲೀಸರ ಬಳಿ ನೀಡುವ ಹೇಳಿಕೆಗಳು ಮುಖ್ಯವಾಗುತ್ತವೆ ಎಂದು ಹೇಳಿದರು.
ಬೇಗ ತನಿಖೆ ಮುಗಿಸುತ್ತೇವೆ: ಈಗಲ್ಟನ್ ರೆಸಾರ್ಟ್‌ನಲ್ಲಿ ಸಿಸಿ ಕ್ಯಾಮರಾ ದೃಶ್ಯ ಗಳನ್ನು ಪಡೆದುಕೊಳ್ಳಲಾಗಿದೆ. ಅದು ತನಿಖೆಯ ಒಂದು ಭಾಗ. ಆದರೆ, ದೃಶ್ಯಾವಳಿಗಳಲ್ಲಿ ಏನಿದೆ ಎಂಬುದನ್ನು ಹೇಳುವುದಿಲ್ಲ. ತನಿಖೆ ಮುಗಿಯುವುದು ಎಷ್ಟು ದಿನ ಎಂದು ಹೇಳಲು ಅಸಾಧ್ಯ. ಆದರೆ, ಆದಷ್ಟು ಬೇಗ ತನಿಖೆ ಮುಗಿಸು ತ್ತೇವೆ. ನಮ್ಮ ಮೇಲೆ ಯಾರ, ಯಾವ ರೀತಿಯ ಒತ್ತಡಗಳೂ ಇಲ್ಲ ಎಂದರು.
ಅಧಿವೇಶನದಲ್ಲಿ ಬಂಧಿಸಲು ಅನುಮತಿ ಬೇಕು: ಕಂಪ್ಲಿ ಶಾಸಕ ಜಿ.ಎನ್.ಗಣೇಶ್ ಅವರು ರೌಡಿ ಶೀಟರ್ ಆಗಿರುವ ಬಗ್ಗೆ ಆ ಜಿಲ್ಲೆಯ ಪೊಲೀಸರಿಂದ ಮಾಹಿತಿ ಪಡೆದು ಕೊಂಡಿದ್ದೇವೆ. ಸದರಿ ಆರೋಪಿಯ ಬಗ್ಗೆ ಮಾಹಿತಿಯನ್ನು ಕೇಳಿದ್ದೇವೆ. ಶಾಸಕ ಗಣೇಶ್ ಅವರ ಬಂಧನಕ್ಕೆ ಸಭಾಪತಿಗಳ ಅನುಮತಿ ವಿಚಾರದಲ್ಲಿ ತಾವು ತಮ್ಮ ಮೇಲಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದು, ಅಧಿವೇ ಶನ ನಡೆಯುವ ವೇಳೆ ಶಾಸಕರನ್ನು ಬಂಧಿಸಲು ಸಭಾಪತಿಗಳ ಅನುಮತಿ ಬೇಕು. ಇದು ಕ್ರಿಮಿನಲ್ ಕೇಸಾದ್ದರಿಂದ ಈಗ ಸಭಾಪತಿಗಳ ಅನುಮತಿಯ ಅಗತ್ಯವಿಲ್ಲ ಎಂದು ತಿಳಿಸಿದರು.