Advertisement

ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮತ್ತೊಬ್ಬ ಶಿಕ್ಷಕಿ ಕೋವಿಡ್ ಸೋಂಕಿನಿಂದ ಸಾವು

03:18 PM May 23, 2021 | Team Udayavani |

ಬೆಳಗಾವಿ: ಇತ್ತೀಚೆಗೆ ಲೋಕಸಭೆ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮತ್ತೋರ್ವ ಶಿಕ್ಷಕಿ ಕೋವಿಡ್ ಗೆ  ಬಲಿಯಾಗಿದ್ದಾರೆ.

Advertisement

ಬೆಳಗಾವಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹುದಲಿಯ ಕನ್ನಡ ಭಾಷಾ ಶಿಕ್ಷಕಿ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದ ಶ್ರೀದೇವಿ ಹುಕ್ಕೇರಿ (37) ಶನಿವಾರ ರಾತ್ರಿ ಕೋವಿಡ್ ಸೋಂಕಿನಿಂದ ಅಕಾಲಿಕ ಮರಣ ಹೊಂದಿದ್ದಾರೆ.

ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೋವಿಡ್ ಗೆ  ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಸಾವಿಗೀಡಾಗಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದವರೇ ಕೊರೊನಾಗೆ ಬಲಿಯಾಗಿದ್ದು ಆಘಾತ ಮೂಡಿಸಿದೆ.

ನಿನ್ನೆಯಷ್ಟೇ ಹುಕ್ಕೇರಿ ತಾಲೂಕಿನ ಹುಲ್ಲೋಳ್ಳಿ ಗ್ರಾಮದ ಹುಲ್ಲೋಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ರಾಜಶೇಖರ ತಳವಾರ (56) ಕೋವಿಡ್ ಸೋಂಕಿಗೆ ಬಲಿಯಾಗಿದ್ದರು.

ಇದನ್ನೂ ಓದಿ : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉತ್ತಮ: ಸುರೇಶ್ ಕುಮಾರ್

Advertisement
Advertisement

Udayavani is now on Telegram. Click here to join our channel and stay updated with the latest news.

Next