Advertisement

ಮತ್ತೊಂದು ಆರು ಬೋಗಿ ಮೆಟ್ರೋ ಸೇರ್ಪಡೆ

11:30 AM Nov 23, 2018 | Team Udayavani |

ಬೆಂಗಳೂರು: ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗಕ್ಕೆ ಗುರುವಾರ ಮತ್ತೂಂದು ಆರು ಬೋಗಿಯ ಮೆಟ್ರೋ ರೈಲು ಸೇರ್ಪಡೆಗೊಂಡಿತು. ಬೆಳಗ್ಗೆ 11.30ಕ್ಕೆ ಮೈಸೂರು ರಸ್ತೆಯಿಂದ ವಿಧಾನಸೌಧದ ಡಾ.ಬಿ.ಆರ್‌.ಅಂಬೇಡ್ಕರ್‌ ನಿಲ್ದಾಣಕ್ಕೆ ಆಗಮಿಸಿದ ಆರು ಬೋಗಿಗಳ ಅಲಂಕೃತ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದರು.

Advertisement

ಒಟ್ಟಾರೆ 150 ಬೋಗಿಗಳ ಪೈಕಿ 12 ಬೋಗಿಗಳನ್ನು ಬಿಇಎಂಎಲ್‌ ಈವರೆಗೆ ಪೂರೈಸಿದ್ದು, ಇದರಲ್ಲಿ ಒಂಬತ್ತು ಕಾರ್ಯಾಚರಣೆ ಆರಂಭಿಸಿವೆ. ಉಳಿದ ಮೂರು ಬೋಗಿಗಳು ಪ್ರಾಯೋಗಿಕ ಹಂತದಲ್ಲಿವೆ. ಮೊದಲ ಮೂರು ಬೋಗಿಗಳ ಪೂರೈಕೆ 2018ರ ಫೆಬ್ರವರಿಯಲ್ಲಿ ಆಗಿತ್ತು.

ಇದರಿಂದ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ 25 ರೈಲುಗಳಲ್ಲಿ ಮೂರು ರೈಲುಗಳು ಆರು ಬೋಗಿಗಳಾಗಿ ಪರಿವರ್ತನೆಗೊಂಡಿವೆ. ಉದ್ಘಾಟನೆ ವೇಳೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಎನ್‌.ಎ.ಹ್ಯಾರೀಸ್‌, ಟಿ.ಎ. ಶರವಣ, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next