ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ಸೋಮವಾರ ವಿಫಲಗೊಳಿಸಿದೆ. ಪರಿಣಾಮ ಓರ್ವ ಭಯೋತ್ಪಾದಕನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಿಲ್ಲೆಯ ದೆಗ್ವಾರ್ ಸೆಕ್ಟರ್‌ನಲ್ಲಿ ಭಯೋತ್ಪಾದಕರು ಒಳನುಸುಳಲು ಯತ್ನಿಸುವ ವೇಳೆ ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸೇನಾ ಪಡೆ ಎಚ್ಚರಿಕೆ ನೀಡಿದರೂ ಇದನ್ನು ಧಿಕ್ಕರಿಸಿ ಮುನ್ನುಗ್ಗುತಿದ್ದ ನುಸುಳುಕೋರನನ್ನು ಸೇನಾಪಡೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆ ಎಂದು ಸೇನಾ ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನದ ಕಡೆಯಿಂದ ನಿಯಂತ್ರಣ ರೇಖೆಯೊಳಗೆ ನುಸುತ್ತಿದ್ದ ಇಬ್ಬರು ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯಲ್ಲಿ ನಡೆದಿದ್ದು ಈ ವೇಳೆ ಓರ್ವ ಸೇನೆಯ ಗುಂಡಿನ ದಾಳಿಗೆ ಮೃತಪಟ್ಟರೆ ಇನ್ನೋರ್ವನಿಗೆ ಗುಂಡೇಟು ತಗುಲಿದ್ದು ಆತನ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕಳೆದ ಕೆಲ ದಿನಗಳಿಂದ ಗಡಿ ಭಾಗದಲ್ಲಿ ಒಳನುಸುಳುವಿಕೆ ಘಟನೆಗಳು ನಡೆಯುತ್ತಿದ್ದು ಸೇನಾ ಪಡೆ ಗಡಿ ಭಾಗದಲ್ಲಿ ಒಳನುಸುಳುವವರಿಗೆ ತಕ್ಕ ಪಾಠ ಕಲಿಸುತ್ತಿದೆ.
ಇದನ್ನು ಓದಿ: Morocco ಭೀಕರ ರಸ್ತೆ ಅಪಘಾತ: 24 ಮಂದಿ ಮೃತ್ಯು, ಹಲವು ಮಂದಿಗೆ ಗಾಯ