ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಟಿಯರಿಗೆ ಮಾದಕ ವಸ್ತು ನಂಟು ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ನಟಿಯ ಪರಿಚಯಸ್ಥನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ನಟಿ ಸಂಜನಾ ಗಲ್ರಾನಿ ಅವರ ಪರಿಚಯಸ್ಥ ರಾಹುಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ರಾಹುಲ್ ಕೆಲ ಡ್ರಗ್ ಪೆಡ್ಲರ್ ಗಳ ಜತೆ ರಾಹುಲ್ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಅಗತ್ಯಬಿದ್ದಲ್ಲಿ ಸಂಜನಾ ಅವರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ಮಾದಕ ವಸ್ತು ಮಾರಾಟ ಪ್ರಕರಣ: ಇಂದು ಇಂದ್ರಜಿತ್ ವಿಚಾರಣೆ
ನಟಿ ರಾಗಿಣಿ ದ್ವಿವೇದಿ ಆಪ್ತನನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ. ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.
ಇದನ್ನೂ ಓದಿ: ಆರು ದೇಶಗಳಿಗೆ ಬೇಕಾಗಿದ್ದ ಹವಾಲಾ ಕಿಂಗ್ ಪಿನ್ ನರೇಶ್ ಕುಮಾರ್ ಜೈನ್ ಬಂಧನ