ಸಿಡ್ನಿ: ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್‌ನಲ್ಲಿ ಸಿಡಿದಿದ್ದು ಹಾರ್ದಿಕ್ ಪಾಂಡ್ಯ. ಅವರು ಮತ್ತು ಧವನ್ ಆಡುವಾಗ ಗೆಲುವಿನ ಆಸೆಯೊಂದು ಮೊಳೆತಿತ್ತು.
ಆದರೆ ಹಾರ್ದಿಕ್‌ಗೆ ಬೆನ್ನು ನೋವಿನ ಕಾರಣ ಬೌಲರ್ ಆಗಿ ಕರ್ತವ್ಯ ನಿರ್ವಹಿಸಲು ಆಗದಿರುವುದರಿಂದ ಭಾರತ ತಾಪತ್ರಯಕ್ಕೆ ಸಿಲುಕಿದೆ. ಮೊದಲ ಪಂದ್ಯದಲ್ಲೂ ಅದು ಕಂಡುಬಂತು.
ಈ ಬಗ್ಗೆ ಮಾತನಾಡುವಾಗ ಹಾರ್ದಿಕ್, ಪರೋಕ್ಷವಾಗಿ ತನ್ನಣ್ಣ ಕೃಣಾಲ್ ಪಾಂಡ್ಯರನ್ನೇ ಯಾಕೆ ಪರಿಗಣಿಸಬಾರದು ಎಂಬ ಸಂದೇಶವನ್ನು ರವಾನಿಸಿದ್ದಾರೆ! ತಂಡದಲ್ಲಿ ಆಲ್‌ರೌಂಡರ್ ಗಳ ಸಮಸ್ಯೆಯಿರುವುದು ಹೌದು. ಆದರೆ ಪಾಂಡ್ಯ ಕುಟುಂಬದಲ್ಲೊಬ್ಬರು ಆಡಲುಕಾಯುತ್ತಿದ್ದಾರೆ ಎಂದು ಹಾರ್ದಿಕ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ ಸಂಘಟಕರು!
ಭಾರತ ಕೇವಲ ಐವರು ಬೌಲರ್ ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಯಾವುದೇ ಬೌಲರ್ ದುಬಾರಿಯಾದರೆ ಮತ್ತೋರ್ವ ಪಾರ್ಟ್ ಟೈಮ್ ಬೌಲರ್ ಇಲ್ಲದೇ ಇರುವುದು ತಂಡಕ್ಕೆ ದುಬಾರಿಯಾಗುತ್ತಿದೆ. ಎರಡನೇ ಏಕದಿನ ಪಂದ್ಯದಲ್ಲಿ ಸೈನಿ ದುಬಾರಿಯಾದಾಗ ಅನಿವಾರ್ಯವಾಗಿ ಹಾರ್ದಿಕ್ ಪಾಂಡ್ಯ ಬಾಲ್ ಹಾಕಬೇಕಾಯಿತು. ನಾಲ್ಕು ಓವರ್ ಬೌಲಿಂಗ್ ಮಾಡಿದ ಪಾಂಡ್ಯ ಒಂದು ವಿಕೆಟ್ ಕೂಡಾ ಕಿತ್ತರು. ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡಾ ಒಂದು ಓವರ್ ಬೌಲಿಂಗ್ ಮಾಡಿದರು.