Advertisement
ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆಕಾಶ್ ಮಧ್ವಾಲ್ ಅವರ ಅದ್ಭುತ ನಿರ್ವಹಣೆಯಿಂದ ಲಕ್ನೋ ತಂಡವನ್ನು 81 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ದ್ವಿತೀಯ ಕ್ವಾಲಿಫೈಯರ್‌ನಲ್ಲೂ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಸ್ಟಾರ್ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಜೋಫ್ರ ಆರ್ಚರ್ ಅವರ ಅನುಪಸ್ಥಿತಿಯ ಹೊರಯಾಗಿಯೂ ಮುಂಬೈ ಶ್ರೇಷ್ಠ ನಿರ್ವಹಣೆ ನೀಡುತ್ತಿರುವುದು ಎದುರಾಳಿಗೆ ಎಚ್ಚರಿಕೆಯ ಗಂಟೆಯಾಗಿದೆ.ಕಳೆದ ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಈ ಬಾರಿ ಆರಂಭದಲ್ಲಿ ಸಾಧಾರಣ ನಿರ್ವಹಣೆ ನೀಡಿತ್ತು. ಆದರೆ ಕೂಟ ಸಾಗುತ್ತಿದ್ದಂತೆ ಮುಂಬೈಯ ಬ್ಯಾಟಿಂಗ್ ವೈಭವ ಪ್ರಕಾಶಮಾನವಾಯಿತು. ಪಂದ್ಯದಿಂದ ಪಂದ್ಯಕ್ಕೆ ಮೇಲುಗೈ ಸಾಧಿಸುತ್ತ ಮೇಲೇರಿದ ಮುಂಬೈ ಅದೃಷ್ಟದ ಬಲದಿಂದ ಪ್ಲೇ ಆಫ್ಗೆ ನೆಗೆಯಿತು. ಕ್ಯಾಮರಾನ್ ಗ್ರೀನ್, ಸೂರ್ಯಕುಮಾರ್ ಯಾದವ್ ಮತ್ತು ಟಿಮ್ ಡೇವಿಡ್ ತಂಡಕ್ಕೆ ಎದುರಾದ ಸವಾಲಿಗೆ ಸಮರ್ಥವಾಗಿ ಉತ್ತರಿಸಿದ್ದು ತಂಡದ ಬ್ಯಾಟಂಗ್ ಶಕ್ತಿಯಾಗಿ ಮೂಡಿ ಬಂದಿದ್ದಾರೆ. ಇದರ ಜತೆ ಯುವ ಆಟಗಾರ ನೇಹಲ್ ವಧೇರ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದು ತಂಡದ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ. ಆರಂಭಕಾರದ ಇಶಾನ್ ಕಿಶನ್ ಮತ್ತು ರೋಹಿತ್ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ.
ಲೀಗ್ ಹಂತದಲ್ಲಿ ಅಮೋಘ ನಿರ್ವಹಣೆ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ನೀರಸ ಪ್ರದರ್ಶನ ನೀಡಿ ಸೋಲನ್ನು ಕಂಡಿತ್ತು. ತಂಡದ ಪ್ರಮುಖ ಆಟಗಾರರ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಶುಭ್‌ಮನ್ ಗಿಲ್ ಮಾತ್ರ ಸ್ವಲ್ಪಮಟ್ಟಿಗೆ ಹೋರಾಟದ ಪ್ರದರ್ಶನ ನೀಡಿದ್ದರೂ ಅದರಿಂದ ತಂಡಕ್ಕೇನೂ ಪ್ರಯೋಜನವಾಗಿಲ್ಲ. ಆದರೆ ಈ ಐಪಿಎಲ್‌ನಲ್ಲಿ ಗಿಲ್ ಅವರ ಸಾಧನೆ ಅತ್ಯಮೋಘವಾಗಿದೆ. ಎರಡು ಶತಕ ಬಾರಿಸಿರುವ ಅವರು ಆಡಿದ 15 ಪಂದ್ಯಗಳಿಂದ 722 ರನ್ ಪೇರಿಸಿದ ಸಾಧಕರಾಗಿದ್ದಾರೆ. ನಾಲ್ಕು ಅರ್ಧಶತಕ ಹೊಡೆದಿದ್ದಾರೆ. ಗುಜರಾತ್‌ನ ಎರಡನೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗಿಂತ 421 ರನ್ ಹೆಚ್ಚು ರನ್ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ವಿಜಯ್ ಶಂಕರ್ 301 ರನ್ ಗಳಿಸಿದ್ದಾರೆ.
Related Articles
Advertisement
ಇದು ಗುಜರಾತ್ ಮತ್ತು ಮುಂಬೈ ನಡುವೆ ಈ ಋತುವಿನಲ್ಲಿ ನಡೆಯ ಲಿರುವ ಮೂರನೇ ಹೋರಾಟ ವಾಗಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ಒಂದರಲ್ಲಿ ಜಯ ಗಳಿಸಿದೆ. ಇದೇ ತಾಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ 55 ರನ್ನುಗಳಿಂದ ಮುಂಬೈಯನ್ನು ಸೋಲಿಸಿತ್ತು. ಇನ್ನೊಂದು ಪಂದ್ಯ ದಲ್ಲಿ ಸೂರ್ಯಕುಮಾರ್ ಯಾದವ್ ಅವರ ಚೊಚ್ಚಲ ಶತಕದಿಂದಾಗಿ ಮುಂಬೈ 27 ರನ್ನುಗಳಿಂದ ಜಯ ಭೇರಿ ಬಾರಿಸಿತ್ತು. ಒಂದು ವೇಳೆ ರಶೀದ್ ಖಾನ್ 32 ಎಸೆತಗಳಿಂದ 72 ರನ್ ಸಿಡಿಸದೇ ಹೋಗಿದ್ದರೆ ಮುಂಬೈಯ ಗೆಲುವಿನ ಅಂತರದ ಇನ್ನಷ್ಟು ಹೆಚಾjಗುತ್ತಿತ್ತು.