Advertisement

ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್

11:02 AM Nov 28, 2020 | keerthan |

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಪಾಕಿಸ್ಥಾನದ ಏಳನೇ ಆಟಗಾರನಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಸದ್ಯ ಪಾಕ್ ತಂಡ ಕ್ರೈಸ್ಟ್ ಚರ್ಚ್ ನ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದು, ಸರಣಿ ರದ್ದಾಗುವ ಭೀತಿ ಎದುರಾಗಿದೆ.

Advertisement

ನ್ಯೂಜಿಲ್ಯಾಂಡ್ ಆರೋಗ್ಯ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಹೋಟೆಲ್ ನಲ್ಲಿರುವ ಪಾಕ್ ತಂಡದ ಏಳನೇ ಸದಸ್ಯನಿಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿರುವುದು ಇಂದು ದೃಢಪಟ್ಟಿದೆ ಎಂದಿದೆ.

ಪಾಕ್ ತಂಡ ನಾಲ್ಕು ದಿನಗಳ ಹಿಂದೆ ನ್ಯೂಜಿಲ್ಯಾಂಡ್ ಗೆ ಆಗಮಿಸಿದೆ. ಮೊದಲ ದಿನವೇ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಆರು ಆಟಗಾರರಿಗೆ ಪಾಸಿಟಿವ್ ವರದಿಯಾಗಿತ್ತು. ಇದೀಗ ಮೂರನೇ ದಿನದ ಟೆಸ್ಟ್ ನಲ್ಲಿ ಮತ್ತೋರ್ವನಿಗೆ ಪಾಸಿಟಿವ್ ವರದಿಯಾಗಿದೆ.

ಇದನ್ನೂ ಓದಿ:ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !

ಡಿಸೆಂಬರ್ 18ರಂದು ಪಾಕ್- ಕಿವೀಸ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಎರಡು ವಾರಗಳ ಕ್ವಾರಂಟೈನ್ ಮುಗಿದ ಬಳಿಕ ಪಾಕ್ ತಂಡ ಅಭ್ಯಾಸ ನಡೆಸಲಿದೆ.

Advertisement

ಛೀಮಾರಿ: ಕಿವೀಸ್ ನೆಲಕ್ಕೆ ಆಗಮಿಸಿದ ಮೊದಲ ದಿನವೇ ಪಾಕ್ ತಂಡ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕಿವೀಸ್ ಸರ್ಕಾರ ಹೇಳಿದೆ. ಕೋವಿಡ್ ನಿಯಮಗಳ ಉಲ್ಲಂಘನೆಯನ್ನು ನ್ಯೂಜಿಲ್ಯಾಂಡ್ ಸರ್ಕಾರ ಸಹಿಸುವುದಿಲ್ಲ, ಇದು ಮುಂದುವರಿದಲ್ಲಿ ತಂಡವನ್ನು ಮರಳಿ ಕಳುಹಿಸಬೇಕಾಗುತ್ತದೆ ಎಂದು ಪಾಕ್ ತಂಡಕ್ಕೆ ಛೀಮಾರಿ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next