ಆದರೆ ಬುಧವಾರ ಪಾಂಬೂರು ದಿಂಡೊಟ್ಟು ಜಾರ್ಜ್ ಫ್ಲೋರಿನ್ ಸಲ್ದಾನ ಅವರ ಮನೆಯ ಸಮೀಪವೇ ಇನ್ನೊಂದು ಚಿರತೆ ಸಂಚರಿಸುವುದು ಕಂಡು ಬಂದಿದೆ. ಗಂಡು ಚಿರತೆ ಬಿದ್ದರೂ ಅದರ ಹೆಣ್ಣು ಚಿರತೆ ಮತ್ತು ಮರಿಗಳು ಇಲ್ಲೇ ಇವೆ ಎಂದು ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಬೆಳ್ಳೆ ಹರೀಶ್ ಶೆಟ್ಟಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಮತ್ತೂಮ್ಮೆ ಕಾರ್ಯಾಚರಣೆ ನಡೆಸಿ ನಾಗರಿಕರ ಆತಂಕ ದೂರಮಾಡುವಂತೆ ಆಗ್ರಹಿಸಿದ್ದಾರೆ.
Advertisement
ಪಾಂಬೂರು, ಪಡುಬೆಳ್ಳೆ ಪರಿಸರದಲ್ಲಿ ಹೈಸ್ಕೂಲು, ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿದ್ದು ಚಿರತೆ ಹಾವಳಿಯಿಂದ ಶಾಲೆಗೆ ಹೋಗುವ ಮಕ್ಕಳು ಹಾಗೂ ಸಾರ್ವಜನಿಕರು ನಡೆದಾಡಲು ಅಂಜುತ್ತಿದ್ದಾರೆ.