Advertisement

ಐಸಿಸ್‌ ಸೇರಿದ್ದ ಕೇರಳದ ಯುವಕ ಅಫ್ಘನ್‌ನಲ್ಲಿ ಸಾವು

08:35 AM Aug 02, 2017 | Karthik A |

ಕಾಸರಗೋಡು: ಕಳೆದ ವರ್ಷ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರಿದ್ದ ಎನ್ನಲಾದ ಕೇರಳದ ಯುವಕ ಮರ್ವಾನ್‌ ಇಸ್ಮಾಯಿಲ್‌(23) ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ವೈಮಾನಿಕ ದಾಳಿಯಲ್ಲಿ ಇಸ್ಮಾಯಿಲ್‌ ಸಾವಿಗೀಡಾಗಿರುವುದಾಗಿ ಆತನ ತಂದೆಗೆ ಟೆಲಿಗ್ರಾಂ ಆ್ಯಪ್‌ ಮೂಲಕ ಸಂದೇಶವೊಂದು ಬಂದಿದೆ. ಜತೆಗೆ, ತ್ರಿಕ್ಕರಿಪುರದ ಸಾಮಾಜಿಕ ಹೋರಾಟಗಾರ ಬಿ.ಸಿ.ಅಬ್ದುಲ್‌ ರೆಹಮಾನ್‌ ಅವರಿಗೂ ಇದೇ ಸಂದೇಶ ಕಳುಹಿಸಲಾಗಿದೆ. ಕೇರಳದಿಂದ ಐಸಿಸ್‌ ಸೇರಲು ಹೋಗಿದ್ದ 21 ಯುವಕರ ಪೈಕಿ ಒಬ್ಬನಾದ ಅಷ್ಫಾಕ್‌ ಮಜೀದ್‌ ಎಂಬಾತನೇ ಈ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿ ಫಿಸಿಯೋಥೆರಪಿಸ್ಟ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಇಸ್ಮಾಯಿಲ್‌ ಕಳೆದ ವರ್ಷವಷ್ಟೇ ಉಗ್ರ ಸಂಘಟನೆಗೆ ಸೇರಲೆಂದು ಮಧ್ಯಪ್ರಾಚ್ಯಕ್ಕೆ ತೆರಳಿದ್ದ ಎಂದಿದ್ದಾರೆ ಪೊಲೀಸರು.

Advertisement

ಏತನ್ಮಧ್ಯೆ, 3 ವರ್ಷಗಳ ಹಿಂದೆ ಇರಾಕ್‌ನಲ್ಲಿ ಐಸಿಸ್‌ ಉಗ್ರರಿಂದ ಅಪಹರಣಕ್ಕೀಡಾದ 39 ಮಂದಿ ಭಾರತೀಯರ ಕುರಿತು ಯಾವುದೇ ಮಾಹಿತಿ ನಮ್ಮಲ್ಲಿಲ್ಲ ಎಂದು ಭಾರತದಲ್ಲಿನ ಸಿರಿಯಾ ರಾಯಭಾರಿ ರಿಯಾದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next