Advertisement

ಸಿನಿಮಾ ಇಷ್ಟವಾಗದಿದ್ದರೆ ಕಾಸ್ ವಾಪಾಸ್

10:17 PM Oct 31, 2019 | Team Udayavani |

ಸೈಬರ್‌ ಕ್ರೈಮ್‌ ಕುರಿತಾಗಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಸೈಬರ್‌ ಜಗತ್ತಿನಲ್ಲಿ ನಡೆಯುವ ಅಪರಾಧ, ಅದರಿಂದಾಗುವ ಮಾನಸಿಕ ತೊಂದರೆಗಳ ಸುತ್ತ ಇಂತಹ ಸಿನಿಮಾಗಳು ಸಾಗುತ್ತವೆ. ಈ ವಾರ ಬಿಡುಗಡೆಯಾಗುತ್ತಿರುವ “ಸಿ++’ ಎಂಬ ಹೊಸಬರ ಸಿನಿಮಾ ಕೂಡಾ ಇದೇ ಜಾನರ್‌ಗೆ ಸೇರಿದೆ. ಈ ಚಿತ್ರದಲ್ಲಿ ಸೈಬರ್‌ನ ಮತ್ತೂಂದು ಮುಖ, ಅದರಲ್ಲಿ ಅತಿಯಾಗಿ ತಲ್ಲೀನರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅಂಶವನ್ನು ಹೇಳಲಾಗಿದೆಯಂತೆ. ಸುರೇಶ್‌ ಲಿಯಾನ್‌ ರೇ ಈ ಚಿತ್ರದ ನಿರ್ದೇಶನ, ನಿರ್ಮಾಣದ ಜೊತೆಗೆ ಮುಖ್ಯಪಾತ್ರ ಕೂಡಾ ಮಾಡಿದ್ದಾರೆ.ಅವರಿಲ್ಲಿ ಹಾರ್ಡ್‌ವೇರ್‌ ಇಂಜಿನಿಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಟೆಕ್ಕಿಯೊಬ್ಬ ಅಮಾಯಕ ರೀತಿಯಲ್ಲಿ ಅಪರಾಧದ ಸುಳಿಯಲ್ಲಿ ಸಿಲುಕುತ್ತಾನೆ. ಅಲ್ಲಿನ ವಾತವರಣದಿಂದ ಕಷ್ಟಪಟ್ಟು ಹೇಗೆ ಹೊರಗೆ ಬರುತ್ತಾನೆ. ಅಂತಹ ಅಪರಾಧವಾದರೂ ಏನು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.

Advertisement

ಕ್ರೈಮ್‌ ಹಿನ್ನೆಲೆಯ ಚಿತ್ರವನ್ನು ಇಷ್ಟಪಡುವವರು ನಾತ್ರ ಚಿತ್ರಮಂದಿರಕ್ಕೆ ಬರಬೇಕು ಎನ್ನುವ ನಿರ್ದೇಶಕರು, ಒಂದು ವೇಳೆ ಸಿನಿಮಾ ಇಷ್ಟವಾಗದಿದ್ದರೆ ಟಿಕೆಟ್‌ ಹಣವನ್ನು ಹಿಂದಿರುಗಿಸುವುದಾಗಿ ಹೇಳುತ್ತದೆ ಚಿತ್ರತಂಡ. ಚಿತ್ರದಲ್ಲಿ ನಾಗೇಂದ್ರ ಅರಸ್‌ ಸಂಕಲನ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ರಾಜ್‌, ಆದರ್ಶ ಸಂಜೀವ್‌, ರಾಘವೇಂದ್ರ, ಪ್ರವೀಣ್‌ ಬಾಬು ನಟಿಸಿದ್ದಾರೆ. ಚಿತ್ರಕ್ಕೆ ಸಂದೀಪ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next