Advertisement
ವಿಮಾನದಲ್ಲಿ ಎಷ್ಟು ಪ್ರಯಾಣಿಕರಿರುತ್ತಾರೆ ಎಂಬ ನಿಖರ ಮಾಹಿತಿ ದೊರಕಿಲ್ಲ. ದುಬಾೖಯಿಂದ ಪ್ರಥಮ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಮಂಗಳೂರಿನಲ್ಲಿ ತೊಂದರೆಗಳಾಗಿರುವ ದೂರು ಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಪ್ರಯಾಣಿಕರು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ವಿಮಾನ ಬೆಂಗಳೂರಿಗೆ
ಮೇ 20 ಮಸ್ಕತ್‌ನಿಂದ ಹಾಗೂ 22ರಂದು ದೋಹಾದಿಂದ ಬೆಂಗಳೂರಿನ ಮೂಲಕ ಮಂಗ ಳೂರಿಗೆ ವಿಮಾನ ಬರುವ ಮಾಹಿತಿಯಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಈ ವಿಮಾನಗಳು ಬೆಂಗಳೂರಿಗೆ ಮಾತ್ರ ಬರಲಿವೆ ಎಂದು ಮಂಗಳೂರು ನಿಲ್ದಾಣದ ಮೂಲಗಳು ತಿಳಿಸಿವೆ. ಕಾರ್ಮಿಕರಿಗೆ ಕಳಪೆ ಅಕ್ಕಿ ಆರೋಪ:ಕೂಲಂಕಷ ಪರಿಶೀಲನೆ
ಝಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ತಮ್ಮ ಊರುಗಳಿಗೆ ತೆರಳಲು ಜೋಕಟ್ಟೆ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ವಲಸೆ ಕಾರ್ಮಿಕರಿಗೆ ನೀಡಲಾದ ಕಳಪೆ ಅಕ್ಕಿ ಇಲಾಖೆಯಿಂದ ಪೂರೈಕೆ ಆಗಿರುವುದಲ್ಲ ಎಂಬ ವರದಿಯನ್ನು ಕಾರ್ಮಿಕ ಇಲಾಖೆ ನೀಡಿದೆ; ಆದ್ದರಿಂದ ಆ ವಿಚಾರದಲ್ಲಿ ಕೂಲಂಕಷ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ತಿಳಿಸಿದ್ದಾರೆ.
Related Articles
Advertisement
ಈಗಾಗಲೇ ದ.ಕ. ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 12,998 ಮಂದಿ ರೈಲಿನ ಮೂಲಕ ತೆರಳಿದ್ದಾರೆ. ಶುಕ್ರವಾರ ಕೂಡ ಬಿಹಾರ ಮತ್ತು ಝಾರ್ಖಂಡ್‌ಗೆ ರೈಲು ಪ್ರಯಾಣ ಇರಲಿದೆ ಎಂದು ಹೇಳಿದರು.
ಇತರ ರಾಷ್ಟ್ರಗಳಿಗೂ ವಿಮಾನಕ್ಕೆ ಆಗ್ರಹ
ಕತಾರ್, ಬಹ್ರೈನ್, ಒಮಾನ್, ಕುವೈಟ್ ಮೊದಲಾದ ಕೊಲ್ಲಿ ರಾಷ್ಟ್ರಗಳಲ್ಲಿಯೂ ಕರಾವಳಿ ಭಾಗದವರು ಕೋವಿಡ್-19 ಕಾರಣ ದಿಂದ ಸಂಕಷ್ಟದಲ್ಲಿದ್ದು, ಅವರನ್ನು ಕೂಡ ಕರ್ನಾಟಕಕ್ಕೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ ಅನಿವಾಸಿ ಭಾರತೀಯರು ಸರಕಾರವನ್ನು ಆಗ್ರಹಿಸಿದ್ದಾರೆ.