ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕಳೆದ ತಿಂಗಳು ಆರಂಭಿಸಿದ್ದ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮಾಗದಲ್ಲಿ ಮತ್ತೂಂದು ಬಸ್ ಸೇರ್ಪಡೆ ಮಾಡಿದೆ. ಮೈಸೂರು ರಸ್ತೆ ಬಸ್ ನಿಲ್ದಾಣ, ಜಯನಗರ ಟಿಟಿಎಂಸಿ, ಮಾಗಡಿ ರೋಡ್ ಟೋಲ್‌ಗೇಟ್, ರಾಜಾಜಿನಗರ 6ನೇ ಬ್ಲಾಕ್, ನವರಂಗ್, ಮಲ್ಲೇಶ್ವರ, ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಪುರ ಮಾರ್ಗವಾಗಿ ಒಂದು ಬಸ್ ಹೊರಡಲಿದೆ.
ಅದೇ ರೀತಿ, ಜಯನಗರ 4 ಬ್ಲಾಕ್, ಸೌತ್ ಎಂಡ್ ವೃತ್ತ, ನಾಗಸಂದ್ರ, ಎನ್.ಆರ್.ಕಾಲೊನಿ, ವಿ.ವಿ.ಪುರ, ಲಾಲ್‌ಬಾಗ್, ಶಾಂತಿನಗರ, ಮೆಯೋಹಾಲ್, ದೊಮ್ಮಲೂರು, ಮಾರತ್‌ಹಳ್ಳಿ, ವೈಟ್‌ಫೀಲ್ಡ್, ಕಾಡುಗೋಡಿ, ಹೊಸಕೋಟೆ ಮಾರ್ಗವಾಗಿ ಮತ್ತೂಂದು ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆ ಜೂ.15ರಿಂದ ಆರಂಭವಾಗಲಿದೆ.
ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್‌ನಲ್ಲಿ ಪ್ರಯಾಣಕ್ಕೆ (ಭಾನುವಾರ-ಗುರುವಾರ) ಒಂದು ಟಿಕೆಟ್‌ಗೆ 2,000 ರೂ., ವಾರಾಂತ್ಯ ದಿನ (ಶುಕ್ರವಾರ ಹಾಗೂ ಶನಿವಾರ) 2,500 ರೂ. ನಿಗದಿಪಡಿಸಲಾಗಿದೆ. 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕ್ರಮವಾಗಿ 1,700 ರೂ. ಹಾಗೂ 2,000 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ಟೂರ್‌ನಲ್ಲಿ ಹೋಟೆಲ್‌ನಲ್ಲಿ ಫ್ರೆಶ್‌ಅಪ್, ಉಪಹಾರ, ಪದ್ಮಾವತಿ ದೇವಸ್ಥಾನ ದರ್ಶನ, ತಿರುಪತಿ-ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ, ಊಟ, ಮರುದಿನ ತಿರುಪತಿಯಿಂದ 2 ಗಂಟೆಗೆ ಹೊರಟು ರಾತ್ರಿ 8ಕ್ಕೆ ಬೆಂಗಳೂರಿಗೆ ಹಿಂತಿರುಗಲಾಗುತ್ತದೆ.
ಪ್ರಯಾಣಿಕರು ಸದರಿ ಪ್ಯಾಕೇಜ್ ಪ್ರವಾಸದ ಆಸನಗಳನ್ನು ನಿಗಮದ ಕೌಂಟರ್, ಖಾಸಗಿ ಬುಕಿಂಗ್ ಕೌಂಟರ್, ಆನ್‌ಲೈನ್ ಹಾಗೂ ಮೊಬೈಲ್ ಮೂಲಕ 30 ದಿನ ಮುಂಚಿತವಾಗಿ ಕಾಯ್ದಿರಿಸಬಹುದು. ಮಾಹಿತಿಗೆ ಮೊ: 77609 90034/ 77609 90035 ಅಥವಾ ದೂ: 080- 49596666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.