Advertisement

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

12:59 AM Oct 29, 2020 | mahesh |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಮೂಗುತೂರಿಸಲು ಹೋಗಿ ಪದೇ ಪದೆ ಮುಖಭಂಗ ಅನುಭವಿ ಸುತ್ತಿರುವ ಪಾಕಿಸ್ಥಾನಕ್ಕೆ ಈ ಬಾರಿಯೂ ತೀವ್ರ ಹಿನ್ನಡೆ ಉಂಟಾಗಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಅ.27 ಅನ್ನು ಕರಾಳ ದಿನವನ್ನಾಗಿ ಆಚರಿಸಲು ಮುಂದಾಗಿದ್ದ ಪಾಕ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟಾಗಿದೆ.

Advertisement

ಸೌದಿ ಅರೇಬಿಯಾ ಮತ್ತು ಇರಾನ್‌ ಕಡೆಯಿಂದಲೂ ಪಾಕ್‌ಗೆ ಬೆಂಬಲ ಸಿಗದಿ ರುವುದರಿಂದ ಪಾಕ್‌ ಸರಕಾರ ಹತಾಶೆ ಗೊಳಗಾಗಿದೆ. ಇರಾನ್‌ನಲ್ಲಿರುವ ಪಾಕ್‌ ರಾಯಭಾರ ಕಚೇರಿಯು, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಟೆಹ್ರಾನ್‌ ವಿವಿಯಲ್ಲಿ ಕಾರ್ಯ ಕ್ರಮವೊಂದನ್ನು ಏರ್ಪಡಿಸುವ ಪ್ರಸ್ತಾಪ ಮಾಡಿತ್ತು. ಆದರೆ, ಅಚ್ಚರಿ ಯೆಂಬಂತೆ, ಇರಾನ್‌ ಸರಕಾರ ಈ ಪ್ರಸ್ತಾವವನ್ನು ತಿರಸ್ಕರಿಸಿದೆ.

ಇನ್ನೊಂದೆಡೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಾರ್ವಜನಿಕ ಕಾರ್ಯ ಕ್ರಮವನ್ನು ಆಯೋಜಿಸುವ ಪಾಕ್‌ ಸರಕಾರದ ಯೋಜನೆಗೂ ಸೌದಿ ರಾಜ ಮನೆತನ ಅಡ್ಡಗಾಲು ಹಾಕಿತು. 2 ಪ್ರಭಾವಿ ಇಸ್ಲಾಮಿಕ್‌ ರಾಷ್ಟ್ರಗಳು ಪಾಕಿಸ್ಥಾನದ ಪ್ರಸ್ತಾಪವನ್ನು ತಿರಸ್ಕರಿಸಿ ರುವುದಕ್ಕೆ ಕಾರಣವೂ ಇದೆ. ಮಧ್ಯ ಪ್ರಾಚ್ಯದಲ್ಲಿ ಇಸ್ಲಾಂ ಸಾಮ್ರಾಜ್ಯದ ನಿಯಂತ್ರಣ ಸಾಧಿಸಲು ಹವಣಿಸುತ್ತಿರುವ ಟರ್ಕಿ ಯೊಂದಿಗೆ ಪಾಕ್‌ ಕೈಜೋಡಿಸಿರು ವುದೇ ಇದಕ್ಕೆ ಕಾರಣ. ಇಮ್ರಾನ್‌ ಖಾನ್‌ ಹಾಗೂ ಟರ್ಕಿಯ ರೆಸೆಪ್‌ ತಯ್ಯಿಪ್‌ ಎಡೋìಗನ್‌ ನಡುವಿನ ಸಂಬಂಧ ಬಲ ಗೊಳ್ಳುತ್ತಿರುವುದರ ಬೆನ್ನಲ್ಲೇ ಸೌದಿ ಮತ್ತು ಇರಾನ್‌ ಸರಕಾರಗಳು ಪಾಕ್‌ ಪ್ರಸ್ತಾಪ ವನ್ನು ತಿರಸ್ಕರಿಸಿರುವುದು ಪಾಕಿ ಸ್ಥಾನಕ್ಕೆ ಇನ್ನಿಲ್ಲದ ಆಘಾತ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next