Advertisement
ತಮ್ಮ ಆಸ್ತಿಯ ಡಿಜಿಟಲ್ ಸಂಖ್ಯೆ ತಿಳಿಯಲು ಹಾಗೂ ಆ ಸಂಖ್ಯೆ ಬಳಸಿ ಸ್ನೇಹಿತರು ಸುಲಭವಾಗಿ ಮನೆಗೆ ಬರಲು ಅನುಕೂಲ ಮಾಡುವುದು ಡಿಜಿ7 ಆ್ಯಪ್‌ನ ಉದ್ದೇಶ. ಆದರೆ, ಆ್ಯಪ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದ ಕಾರಣಕ್ಕೆ ಆ್ಯಪ್ ಡೌನ್‌ಲೋಡ್ ಮಾಡಿದ ನಾಗರಿಕರು ತಮ್ಮ ಕಾಮೆಂಟ್‌ಗಳ ಮೂಲಕ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Related Articles
Advertisement
ತೆರಿಗೆ ಪಾವತಿಸದ ಮಾಹಿತಿ ಬಹಿರಂಗ: ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಡಿಜಿಟಲ್ ಡೋರ್ ಸಂಖ್ಯೆ ತಂತ್ರಾಂಶ ಹಾಗೂ “ಡಿಜಿ 7 ಮೊಬೈಲ್ ಅಪ್ಲಿಕೇಷನ್’ನ್ನು 83 ಸಾವಿರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಆ್ಯಪ್‌ನಲ್ಲಿ ಪಿಐಡಿ ಅಥವಾ ಅಪ್ಲಿಯೇಷನ್ ಸಂಖ್ಯೆ ಹಾಕಿದರೆ, ಆಸ್ತಿಯ ವಿವರ ಸಿಗಲಿದೆ. ಈ ವೇಳೆ ಆಸ್ತಿಯ ಡಿಜಿಟಿಲ್ ಸಂಖ್ಯೆಯೊಂದಿಗೆ ಆಸ್ತಿಯ ಮಾಲೀಕರು ತೆರಿಗೆ ಪಾವತಿಸಿದಿದ್ದರೆ, ಇವರು ಪಾಲಿಕೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ನೀಡುತ್ತದೆ.
ಇಂದಿರಾ ಕ್ಯಾಂಟೀನ್ ಆ್ಯಪ್ ನಂ.1: ಪಾಲಿಕೆಯಿಂದ ರಸ್ತೆಗುಂಡಿ ಸಮಸ್ಯೆ, ಬೀದಿ ದೀಪ, ಗಿಡ ಹಂಚಿಕೆ, ಕ್ಯಾಂಟೀನ್ ಮಾಹಿತಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಹತ್ತಾರು ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಲಾಗಿದೆ.
ಅದರಂತೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಪಾಲಿಕೆಯ ಆ್ಯಪ್‌ಗ್ಳ ಪೈಕಿ ಅತಿಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿರುವ (50 ಸಾವಿರ) ಹಾಗೂ ಹೆಚ್ಚಿನ ರೇಟಿಂಗ್ (4.0) ಪಡೆದಿರುವ ಆ್ಯಪ್ ಎಂಬ ಹೆಗ್ಗಳಿಕೆಗೆ “ಇಂದಿರಾ ಕ್ಯಾಂಟೀನ್’ ಆ್ಯಪ್ ಪಾತ್ರವಾಗಿದೆ. ಇದರೊಂದಿಗೆ ಗಿಡಗಳ ಹಂಚಿಕೆಗೆ ಅಭಿವೃದ್ಧಿಪಡಿಸಿದ “ಬಿಬಿಎಂಪಿ ಗ್ರೀನ್’ ಆ್ಯಪ್‌ಗೂ ಸಹ 4.0 ರೇಟಿಂಗ್ ನೀಡಲಾಗಿದ್ದು, ಪಾಲಿಕೆಯ ಆ್ಯಪ್‌ಗ್ಳ ಪೈಕಿ “ಡಿಜಿ7′ ಆ್ಯಪ್‌ಗೆ ಅತ್ಯಂತ ಕಡಿಮೆ (2.4) ರೇಟಿಂಗ್ ನೀಡಲಾಗಿದೆ.
ತೆರಿಗೆ ಪಾವತಿಸಿ ಸಂಖ್ಯೆ ಪಡೆಯಿರಿ: ನಾಗರಿಕರಿಗೆ ಸುಲಭವಾಗಿ ಡಿಜಿ ಸಂಖ್ಯೆ ದೊರೆಯುವಂತೆ ಮಾಡಲು ಮುಂದಾಗಿರುವ ಬಿಬಿಎಂಪಿ, ಆಸ್ತಿ ತೆರಿಗೆ ಪಾವತಿಯ ಚಲನ್ ಹಾಗೂ ರಸೀದಿಯಲ್ಲಿ ಡಿಜಿಟಲ್ ಸಂಖ್ಯೆ ನಮೂದಿಸಲು ಯೋಜನೆ ರೂಪಿಸಿದೆ. ಅದರಂತೆ ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಸಲು ಜನರೇಟ್ ಮಾಡುವ ಚಲನ್ ಹಾಗೂ ತೆರಿಗೆ ಪಾವತಿಸಿದ ನಂತರ ದೊರೆಯುವಂತಹ ರಸೀದಿಯಲ್ಲಿ ಆಸ್ತಿಯ ಡಿಜಿಟಲ್ ಸಂಖ್ಯೆ ಮುದ್ರಿತವಾಗಿರುತ್ತದೆ.
ಪಾಲಿಕೆ ಆ್ಯಪ್‌ಗ್ಳ ಸಾಧನೆ ಪಟ್ಟಿಆ್ಯಪ್ ಡೌನ್‌ಲೋಡ್‌ಗಳು ರೇಟಿಂಗ್ ರೇಟಿಂಗ್ ಕೊಟ್ಟವರ ಸಂಖ್ಯೆ
ಬಿಬಿಎಂಪಿ ಸಹಾಯ 10,000+ 2.8 431
ಬಿಬಿಎಂಪಿ ಗ್ರೀನ್ 10,000+ 4.0 232
ಕ್ಲೀನ್ ಬೆಂಗಳೂರು 500+ 3.0 22
ಇಂದಿರಾ ಕ್ಯಾಂಟೀನ್ 50,000+ 4.0 972
ಫಿಕ್ಸ್ ಮೈ ಸ್ಟ್ರೀಟ್ 10,000+ 2.5 342
ಡಿಜಿ7 1,000+ 2.4 44 ಬಳಕೆದಾರರ ಅಭಿಪ್ರಾಯ
ಗೂಗಲ್ ಮ್ಯಾಪ್‌ನಲ್ಲಿ ನಮ್ಮ ಆಸ್ತಿಯ ಲೊಕೇಷನ್ ಸರಿಯಾಗಿ ತೋರಿಸುತ್ತಿದೆ. ಆದರೆ, ಡಿಜಿ7 ಆ್ಯಪ್‌ನಲ್ಲಿ ಬೇರೆ ಯಾವುದೋ ಸ್ಥಳ ತೋರಿಸಿ ಗೊಂದಲ ಮೂಡಿಸುತ್ತಿದೆ. ಹೀಗಾಗಿ ಆ್ಯಪ್‌ನ್ನು ಡಿಲಿಟ್ ಮಾಡುತ್ತಿದ್ದೇನೆ.
-ನಾರಾಯಣ್ ಎಸ್. ಬಾಲಾಜಿ ಡಿಜಿ ಸಂಖ್ಯೆ ಬಳಸಿ ಸ್ನೇಹಿತನಿಗೆ ನನ್ನ ಲೊಕೇಷನ್ ಶೇರ್ ಮಾಡಿದಾಗ ಬೇರೆ ಯಾವುದೋ ಜಾಗ ತೋರಿಸುತ್ತಿದ್ದು, ಅತ್ಯಂತ ಕೆಟ್ಟ ಆ್ಯಪ್ ಇದಾಗಿದೆ. ಲಾಂಡ್ರಿ ಶಾಪ್ ಹಾಗೂ ಹಾಲು ಮಾರುವವರ ಆ್ಯಪ್ ಇದಕ್ಕಿಂತ ಉತ್ತಮವಾಗಿದೆ.
-ರೂಪೇಶ್ ಅದ್ಭುತವಾದ ಆ್ಯಪ್ ಇದಾಗಿದ್ದು, ನಾಗರಿಕರು ನೀಡುವ ಸಲಹೆಗಳನ್ನು ಸ್ವೀಕರಿಸಿ ಇನ್ನಷ್ಟು ಕೆಲವು ಮಾರ್ಪಾಡುಗಳನ್ನು ಮಾಡಿದರೆ ನಗರದಲ್ಲಿನ ಆಸ್ತಿಗಳನ್ನು ಹುಡುಕಲು ಸುಲಭವಾಗಲಿದೆ.
-ಮಧು ಶೆಟ್ಟಿ * ವೆಂ.ಸುನೀಲ್ ಕುಮಾರ್